ಮಡಿಕೇರಿ, ಡಿ. 1: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಫಿದಾಕ ಯಾ ರಸೂಲಲ್ಲಾಹ್ ಮಿಲಾದ್ ಸಮಾವೇಶ ಹಾಗೂ ವಾರ್ಷಿಕ ಮಹಾಸಭೆಯು ತಾ. 16 ರಂದು ಸಂಜೆ 6 ಘಂಟೆಗೆ ದುಬೈ ದೇರಾ ಬನಿಯಾಸ್‍ರಸ್ತೆಯಲ್ಲಿರುವ ಪಿಯರ್ಲ್ ಕ್ರೀಕ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ. ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸ್ ಸಖಾಫಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ, ಹಮೀದ್ ನಾಪೋಕ್ಲು ಹಾಗೂ ಇಸ್ಮಾಯಿಲ್ ಕೊಳಕೇರಿ ಬಿಡುಗಡೆ ಗೊಳಿಸಿದರು. ಗೌರವಾಧ್ಯಕ್ಷರು ಹಾಗೂ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಶಿಕ್ಷಣ ವಿಭಾಗ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಅವರುಗಳು ಮಾತನಾಡಿ, ಮಿಲಾದ್ ಸಮಾವೇಶ ಯಶಸ್ವಿಗೆ ಸರ್ವರೂ ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಫಿದಾಕ ಯಾ ರಸೂಲಲ್ಲಾಹ್ ಮಿಲಾದ್ ಸಮಾವೇಶದ ಪ್ರಯುಕ್ತ ಬುರ್ದಾ ಮಜ್ಲಿಸ್, ಮೌಲೂದ್ ಪಾರಾಯಣ, ರಸಪ್ರಶ್ನೆ, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಮಿಲಾದ್ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷ ಅಹಮದ್ ಚಾಮಿಯಾಲ್, ಖಲೀಲ್ ಭಾಷಾ ಮಡಿಕೇರಿ, ಮುಹಮ್ಮದ್ ಹಾಜಿ ಕೊಂಡಂಗೇರಿ, ಮೊಯ್ದು ಗುಂಡಿಗೆರೆ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸ್ವಾಗತಿಸಿ, ಅರಫಾತ್ ನಾಪೋಕ್ಲು ವಂದಿಸಿದರು.