ಕುಶಾಲನಗರ, ಡಿ. 21: ಅರಣ್ಯ ಇಲಾಖೆಯವರು ತೆರವುಗೊಳಿಸಿದ ದಿಡ್ಡಳ್ಳಿಯ ಲ್ಲಿಯ 577 ಆದಿವಾಸಿ ಕುಟುಂಬಸ್ಥರಿಗೆ ನಿವೇಶನವನ್ನು ತಕ್ಷಣ ಒದಗಿಸಿ ಕೊಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ನಾಡಕಛೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಕೆ.ಬಿ.ರಾಜು, ನೇತೃತ್ವದಲ್ಲಿ ಹೋಬಳಿ ಅಧ್ಯಕ್ಷ ಕೀರ್ತಿರಾಜು, ಸಂಘಟನಾ ಸಂಚಾಲಕ ನಾಗರಾಜು, ಪ್ರಮುಖರಾದ ಸ್ವಾಮಿ, ದಿನೇಶ್, ಮಹದೇವ, ಜಗದೀಶ್, ಮುರುಳಿ, ದೀಪಕ್, ಅಭಿಷೇಕ್, ಗೋಪಾಲ್ ಕೃಷ್ಣ ಹಾಗೂ ಮತ್ತಿತರರು ಇದ್ದರು.