ಗೋಣಿಕೊಪ್ಪಲು, ಸೆ. 8: ಕಾವೇರಿ ದಸರಾ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲಿ ನಡೆಸುವಂತೆ ಗೋಣಿಕೊಪ್ಪ ನಗರ ಕಾಂಗ್ರೆಸ್ ಒತ್ತಾಯಿಸಿದೆ.ದಸರಾ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಇನ್ನೂ ಸಮಿತಿ ರಚನೆ ಮಾಡದೆ ದಸರಾ ಆಚರಿಸಲು ತೊಂದರೆಯಾಗಲಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದಿಂದ ಅನುದಾನ ಪಡೆಯಲು ದಸರಾ ಸಮಿತಿ ನಿಯೋಗ ತೆರಳಬೇಕಿದೆ. ಸಮಿತಿ ರಚನೆಯಾಗದ ಕಾರಣ ಯಾವ ಕೆಲಸಗಳು ನಡೆಯುತ್ತಿಲ್ಲ. ಕೇವಲ ಲೆಕ್ಕಪತ್ರ ಮಂಡನೆ ಮಾಡುವ ಮೂಲಕ ಈ ಬಾರಿ ದಸರಾ ನಡೆಯುವದಿಲ್ಲ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಒಂದಷ್ಟು ಪತ್ರ ವ್ಯವಹಾರಗಳು ನಡೆಯ ಬೇಕಿದೆ. ದಸರಾ ಸಮೀಪಿಸುವಾಗ ಸಮಿತಿ ರಚಿಸಿ ಗುಣಮಟ್ಟವಿಲ್ಲದ ಸಾಂಸ್ಕøತಿಕ ಕಾರ್ಯಕ್ರಮ ನೀಡುವ ದೌರ್ಭಾಗ್ಯ ಬರಬಾರದು ಎಂದರು. ಅಧ್ಯಕ್ಷರ ಆಯ್ಕೆಯಲ್ಲಿ ಯಾವದೇ ರಾಜಕೀಯ ಬೆರೆತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಬಹುಮತದಂತೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಬಗ್ಗೆ ಮುತುವರ್ಜಿ ವಹಿಸಿಕೊಂಡು ಸಮಿತಿ ರಚನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಲಾಂ ಉಪಸ್ಥಿತರಿದ್ದರು.