ಮಡಿಕೇರಿ, ಸೆ. 22: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ವರ್ಷಂಪ್ರತಿ ಏರ್ಪಡಿಸಲಾಗುತ್ತಿರುವ ದಸರಾ ಬಹುಭಾಷಾ ಕವಿಗೋಷ್ಠಿ ಯನ್ನು ಈ ಬಾರಿ ಕೂಡ ಏರ್ಪಡಿಸ ಲಾಗುತ್ತಿದೆ. ಕವಿಗೋಷ್ಠಿಗೆ ಜಿಲ್ಲೆಯ ಕವಿ- ಕವಯತ್ರಿಯರು ಕವನಗಳನ್ನು ಕಳುಹಿಸಿ ಕೊಡಬಹುದಾಗಿದೆ. ಆಯ್ಕೆ ಯಾದ ಕವನಗಳನ್ನು ಗೋಷ್ಠಿಯಲ್ಲಿ ವಾಚಿಸಲು ಅವಕಾಶ ಕಲ್ಪಸಲಾಗುವದು. ಅಲ್ಲದೆ ಕವನ ಸಂಕಲನÀದಲ್ಲಿ ಪ್ರಕಟಿಸಿ ಹೊರತರಲಾಗುವದು.
ಕನ್ನಡ, ಕೊಡವ, ಅರೆಭಾಷೆ, ತುಳು, ಬ್ಯಾರಿ, ಕೊಂಕಣಿ, ತಮಿಳು, ತೆಲುಗು, ಕುಂಬಾರ, ಹವ್ಯಕ, ಉರ್ದು, ಮರಾಠಿ, ಇಂಗ್ಲೀಷ್ ಹೀಗೆ ಯಾವದೇ ಭಾಷೆಯಲ್ಲಿ ಕವನಗಳನ್ನು ರಚಿಸಬಹುದಾಗಿದೆ. ಕವನಗಳು 20 ಸಾಲಿನ ಮಿತಿಯಲ್ಲಿರಬೇಕಿದೆ. ಆಸಕ್ತಿ ಇರುವ ಹೊರ ಜಿಲ್ಲೆಯ ಕವಿಗಳಿಗೂ ಅವಕಾಶ ವಿದೆ. ನಾಡು, ನುಡಿ, ಪರಂಪರೆ ಹಾಗೂ ಪ್ರಸ್ತುತ ವಿಚಾರಗಳನ್ನೊಳಗೊಂಡ ಕವನಗಳಿಗೆ ಆದ್ಯತೆ ನೀಡಲಾಗುವದು. ಕವನಗಳನ್ನು ತಾ. 30ರ ಒಳಗಾಗಿ ಅಧ್ಯಕ್ಷರು, ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ ಇಲ್ಲಿಗೆ ಕಳುಹಿಸಿ ಕೊಡಬಹುದಾಗಿದೆ ಎಂದು ಸಮಿತಿ ಕಾರ್ಯದರ್ಶಿ ಹೆಚ್.ಆರ್.ಎನ್. ಮೂರ್ತಿ ತಿಳಿಸಿದ್ದಾರೆ.