ವೀರಾಜಪೇಟೆ, ಆ. 19 : ಇಬ್ಬರು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ದೂರನ್ನು ಬಾಳೆಲೆ ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣೆ ಅಧಿಕಾರಿಗಳಿಗೆ ನೀಡಿದರೂ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿರುವದರಿಂದ ಮುಂದಿನ 10ದಿನಗಳೊಳಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿದ್ದರೆ ತಾ. 29ರಂದು ವೀರಾಜಪೇಟೆ ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಮುಷ್ಕರ ಹೂಡುವದಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಸ್.ಕೃಷ್ಣಪ್ಪ ತಿಳಿಸಿದ್ದಾರೆ.
ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಪ್ಪ ಅವರು, ತಾ.15ರಂದು ಬಾಳೆಲೆಗೆ ಸಮೀಪದ ಬೆಂಡೆಗುತ್ತಿ ಪೈಸಾರಿ ನಿವಾಸಿ ಎರವರ ಸನ್ನು ಎಂಬವರಿಗೆ ಕ್ಷುಲ್ಲಕ ವಿಚಾರಕ್ಕಾಗಿ ಸಮೀಪದ ಪಿ. ಸೀಪಾ ಹಾಗೂ ಪಿ. ಶಶಿ ಎಂಬಿಬ್ಬರು ಸೇರಿ ವಿನಾ ಕಾರಣ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸನ್ನುವಿನ ಪತ್ನಿ ಪಾಪು ಬಾಳೆಲೆÉ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ಸಂಜೆ 6 ಗಂಟೆಗೆ ಪೊನ್ನಂಪೇಟೆಯ ಪೆÀಟ್ರೋಲ್ ಬಂಕ್ ಬಳಿ ಇಟ್ಟಿಗೆ ಘಟಕದಲ್ಲಿ ಕಾರ್ಮಿಕ ನಾಗಿ ದುಡಿದ ಬಾಕಿ ವೇತನ ರೂ. 2000ವನ್ನು ಘಟಕದ ಮಾಲೀಕ ಸಿ. ಸುರೇಶ್ ಹಾಗೂ ಎಂ. ಸಜನ್ ಎಂಬವರಲ್ಲಿ ಕೇಳಿದ್ದರಿಂದÀ ಎರವರ ಅಣ್ಣಪ್ಪ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸುವದÀರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಇಂದು ಬೆಳಿಗ್ಗೆ ಪೊನ್ನಂಪೇಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯರಾಂ ಅವರಿಗೆ ದೂರು ನೀಡಿದಾಗ ಸ್ವೀಕೃತಿ ಪತ್ರ ನೀಡಿ ದೂರು ದಾಖಲಿಸಲು ನಿರಾಕರಿಸಿ ದರು. ಅಣ್ಣಪ್ಪ ಅವರ ಕಣ್ಣು ಹಾಗೂ ಹಣೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯ ಉಂಟಾಗಿದನ್ನು ಕೃಷ್ಣಪ್ಪ ಪ್ರೆಸ್ಕ್ಲಬ್ನಲ್ಲಿದ್ದ ಪತ್ರಕರ್ತರಿಗೆ ತೋರಿಸಿದರು.
ಈ ಎರಡು ಪ್ರಕರಣಗಳಲ್ಲಿ ಪೊಲೀಸರು ಏಕಪಕ್ಷೀಯವಾಗಿ ವರ್ತನೆ ಮಾಡುತ್ತಿದ್ದು, ಈ ಸಂಬಂಧ ಸಂಘಟನೆ ನ್ಯಾಯಾಲಯದ ಮೊರೆ ಹೋಗಲು ಹಿಂಜರಿಯವದಿಲ್ಲ. ಗಾಯಾಳು ಸನ್ನು ಹಾಗೂ ಅಪ್ಪಣ್ಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದ ದಲಿತ ಸಂಘಟನೆ ಸಂಚಾಲಕರು ಪದಾಧಿಕಾರಿ ಗಳಿಗೆ ಪೊಲೀಸ್ ಅಧಿಕಾರಿಗಳು ಕಾಫಿ, ಟೀ, ನೀಡಿ ಸಾಂತ್ವನ ಹೇಳಿ ಕಳಿಸುತ್ತಿದ್ದಾರೆ ಎಂದು ಸಂಘಟನೆಯ ಸಹ ಸಂಚಾಲಕ ಎಚ್.ಆರ್. ಪರಶುರಾಮ್ ತಿಳಿಸಿದರು.
ಗೋಷ್ಠಿಯಲ್ಲಿ ಗಾಯಾಳು ಅಪ್ಪಣ್ಣ, ತಾಲೂಕು ಮಹಿಳಾ ಘಟಕದ ಸಂಚಾಲಕಿ ಎಚ್.ಎಸ್.ಲಕ್ಷ್ಮಿ ಸನ್ನುವಿನ ಪತ್ನಿ ಪಾಪು, ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.
ಡಿವೈಎಸ್ಪಿಗೂ ದೂರು : ಈ ಎರಡು ಪ್ರಕರಣಗಳ ಕುರಿತು ಡಿವೈಎಸ್ಪಿ ನಾಗಪ್ಪ ಅವರನ್ನು ಸಂಘಟನೆಯ ಪ್ರಮುಖರು ಗಾಯಾಳುಗಳೊಂದಿಗೆ ಭೇಟಿ ಮಾಡಿ ಪ್ರಕರಣದ ಕುರಿತು ವಿವರಿಸಿರುವದಾಗಿ ಕೃಷ್ಣಪ್ಪ ತಿಳಿಸಿದರು.