ನಾಪೆÉÇೀಕ್ಲು, ನ. 21 :ಇಲ್ಲಿಗೆ ಸಮೀಪದ ಚೋನಕೆರೆ ಬಳಿಯ ತೋಟದ ಲೈನ್‍ಮನೆಯೊಂದರಲ್ಲಿ ವಾಸವಿದ್ದ ಅಸ್ಸಾಂ ಮೂಲದ ಕಾರ್ಮಿಕರು ಲೈನ್ ಮನೆಯ ಅಂಗಳ ದಲ್ಲಿ ದನದ ಮಾಂಸ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದಾಗ ಮಾಂಸ ಕತ್ತರಿಸುತ್ತಿದ್ದ ಅಸ್ಸಾಮಿ ಮೂಲದ ಮುಜೀದ್ ಎಂಬಾತ ಓಡಿ ಹೋಗಿ ತಲೆ ಮರೆಸಿಕೊಂಡಿರುತ್ತಾನೆ. ಮನೆ ಯಲ್ಲಿ ಮಾಂಸದ ಸಾರು ಪಾತ್ರೆಯಲ್ಲಿ ಕಂಡು ಬಂತು. ಸ್ಥಳಕ್ಕೆ ನಾಪೆÉÇೀಕ್ಲು ಪೋಲಿಸ್ ಠಾಣೆಯ ಎ.ಎಸ್.ಐ. ವಿಶ್ವನಾಥ್, ಹೆಡ್ ಕಾನ್ಸ್‍ಟೇಬಲ್ ಸಮ್ಮದ್, ರಾಜ ಆಗಮಿಸಿ ಮಾಂಸ, ಕತ್ತಿ ಮತ್ತಿತರ ವಸ್ತುಗಳನ್ನು ವಶಪಡಿಸಿ ಕೊಂಡು ಮುಖ್ಯ ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ದನದ ಮಾಂಸ ದಂಧೆ ನಿರಂತರವಾಗಿ ನಡೆಯುತ್ತಿದ್ದು ಹಲವು ರೈತರು ತಮ್ಮ ದನ ಕರುಗಳನ್ನು ಕಳೆದುಕೊಳ್ಳುತ್ತಿರುವ ಘಟನೆ ನಿರಂತರವಾಗಿದೆ. ಇತ್ತೀಚೆಗೆ ಹಳೇ ತಾಲೂಕಿನಲ್ಲಿ ಊರು ಬಸವ ಎಂದು ಕರೆಯುತ್ತಿದ್ದ ಗೂಳಿ ಮತ್ತು ಹಸುವನ್ನು ಕದೀಮರು ಕದ್ದೊಯ್ದ ಘಟನೆ ನಡೆದಿದ್ದು ಪೊಲೀಸರು ಅಸ್ಸಾಮಿ ಎಂದು ಹೇಳಿಕೊಳ್ಳುತ್ತಿರುವ ಜನರ ಮೇಲೆ ಹೆಚ್ಚಿನ ನಿಗಾ ಇಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂದರ್ಭ ಗ್ರಾಮ ಪಂಚಯತ್ ಸದಸ್ಯೆ ಕುಲ್ಲೇಟಿರ ಜ್ಯೋತಿ ನಾಚಪ್ಪ, ಸಾರ್ವಜನಿಕರಾದ ಬಿ.ಎಂ. ಪ್ರತೀಪ್, ಪಾಡಿಯಮ್ಮಂಡ ಮನು, ಕಂಗಂಡ ಜಾಲಿ ಪೂವಪ್ಪ, ಕುಟ್ಟೆಂಜಟ್ಟೀರ ಪೂಣಚ್ಚ, ಶಿವಚಾಳಿಯಂಡ ಕಿಶೋರ್, ಕುಲ್ಲೇಟಿರ ರಾಜೇಶ್ ಹಾಗೂ ಇನ್ನಿತರರು ಇದ್ದರು.

-ದುಗ್ಗಳ ಸದಾನಂದ