ಮಡಿಕೇರಿ, ಜು. 19: ಬ್ರೆಜಿಲ್ ದಕ್ಷಿಣ ಭಾಗದಲ್ಲಿ ದಟ್ಟವಾಗಿ ಹಿಮ ಸುರಿಯುತ್ತಿದ್ದು, ಕಾಫಿ ಬೆಳೆ ಹಾಗೂ ಗಿಡಗಳಿಗೆ ಭಾರೀ ಹಾನಿ ಆಗಿರುವದಾಗಿ ಹೇಳಲಾಗಿದೆ. ಕಾಫಿ ಬೆಳೆಗಾರರ ಅಭಿಪ್ರಾಯದಂತೆ ಈಗಾಗಲೇ ಎತ್ತರ ಪ್ರದೇಶದಲ್ಲಿರುವ ಕಾಫಿ ತೋಟಗಳು ಹಿಮಪಾತದಿಂದ ನಲುಗಿದ್ದು, ಹವಾಮಾನ ತಜ್ಞರ ಅಭಿಪ್ರಾಯದಂತೆ ಮತ್ತಷ್ಟು ಹಿಮಪಾತ ಸಂಭವಿಸಲಿದೆ.

ಅಲ್ಲಿನ ಉಷ್ಣಾಂಶ ರಾತ್ರಿ ಸಂದರ್ಭ ಎರಡು ಡಿಗ್ರಿಗೆ ಇಳಿಯುತ್ತಿದ್ದು, ಕಾಫಿಯ ಎಲೆ ಹಾಗೂ ಕಾಯಿ 3-4 ಡಿಗ್ರಿ ಉಷ್ಣಾಂಶಕ್ಕೆ ಬಿರುಕು ಬಿಡಲಾರಂಭಿಸುತ್ತದೆ. ಉಷ್ಣಾಂಶದಿಂದ ಘಾಸಿಗೊಂಡ ಕಾಫಿ ಬೆಳೆ ಬಳಕೆಗೆ ಅಸಾಧ್ಯ ಹಾಗೂ ಗಿಡಗಳು ಮುಂದಿನ ಸಾಲಿನಲ್ಲೂ ಬೆಳೆ ನೀಡಲಾರವು.