ನಾಪೆÇೀಕ್ಲು, ಆ. 28: ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯರು ಲಭ್ಯವಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯ ಮ್ಮಂಡ ಮುರಳಿ ಕರುಂಬಮ್ಮಯ್ಯ ಸಲಹೆ ನೀಡಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸ ಲಾಗಿದ್ದ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಂಡು ಬರುತ್ತಿದೆ. ನಾಪೆÇೀಕ್ಲು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದರೂ ಸರಕಾರ ದಂತ ವೈದ್ಯರನ್ನು ನೇಮಕಗೊಳಿಸಿದೆ. ಆದರೆ ದಂತ ಚಿಕಿತ್ಸೆಗೆ ಆಗಮಿಸುವ ರೋಗಿಗಳ ಸಂಖ್ಯೆ ಕಡಿಮೆಯಿದೆ. ರೋಗಿಗಳು ಇಲ್ಲ ಎಂಬ ಕಾರಣಕ್ಕಾಗಿ ದಂತ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಿದ್ದಲ್ಲಿ ಸಾರ್ವಜನಿಕರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು. ಸಭೆಯಲ್ಲಿ ತಜ್ಞ ವೈದ್ಯರ ನೇಮಕ, ಆಸ್ಪತ್ರೆ ಉನ್ನತೀ ಕರಣ, ತಡೆಗೋಡೆ ನಿರ್ಮಾಣ, ಇಂಗುಗುಂಡಿ ನಿರ್ಮಾಣ, ನೀರಿನ ವ್ಯವಸ್ಥೆ, ಕುರಿಗಳ ಹಾವಳಿ, ವೈದ್ಯರ ಭದ್ರತೆ, ಭದ್ರತಾ ಸಿಬ್ಬಂದಿ ನೇಮಕ, ಆಸ್ಪತ್ರೆ ರಸ್ತೆಯಲ್ಲಿ ಖಾಸಗಿ ವಾಹನಗಳ ನಿಲುಗಡೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಾ ಸಮಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎಂ. ರಶೀದ್, ಸಾಹಿರಾಭಾನು, ರಕ್ಷಾ ಸಮಿತಿ ಸದಸ್ಯರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಎಂ.ಎ. ಮನ್ಸೂರ್ ಅಲಿ, ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್, ತಾಲೂಕು ವೈದ್ಯಾಧಿಕಾರಿ ರವಿ ಕುಮಾರ್, ಸೂಪರಿಡೆಂಟ್ ಮಧು ಸೂಧನ್, ಡಾ. ಜಗದೀಶ್, ಡಾ. ನವೀನ್, ದಂತ ವೈದ್ಯೆ ಡಾ. ಅನುಷಾ, ನಾಪೆÇೀಕ್ಲು ಠಾಣಾಧಿಕಾರಿ ವೆಂಕಟೇಶ್, ಆಪ್ತ ಸಮಾಲೋಚಕ ಕೃಷ್ಣ ಕುಮಾರ್, ನೇತ್ರಾಧಿಕಾರಿ ರಮೇಶ್, ಘನಾವತಿ, ಹೇಮಾವತಿ ಮತ್ತಿತರ ಸಿಬ್ಬಂದಿ ಇದ್ದರು.