ನಾಪೆÇೀಕ್ಲು, ಡಿ. 18: ಸಿ.ಎನ್.ಸಿ ಕಳೆದ 25 ವರ್ಷಗಳಿಂದ ಕೊಡವರ ಭದ್ರತೆಗಾಗಿ ಹೋರಾಡುತ್ತಾ ಬಂದಿದೆ. ಅದರ ಫಲ ಎಂಬಂತೆ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನ ಮಾನ ನೀಡುವ ಸಲುವಾಗಿ ರಾಜ್ಯ ಸರಕಾರದ ವತಿಯಿಂದ ನಡೆಸಲಾಗುತ್ತಿರುವ ಕುಲ ಶಾಸ್ತ್ರೀಯ ಅಧ್ಯಯನದ ಗಣತಿಯನ್ನು ಕೆಲವರು ಸರಕಾರದೊಂದಿಗೆ ಪಿತೂರಿ ನಡೆಸಿ ನಿಲ್ಲಿಸಿರುವದು ಖಂಡನೀಯ. ಈ ಬಗ್ಗೆ ತಾ.19ರ ಸೋಮವಾರ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಧರಣಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ನೀಡಲಾಗುವದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ನಂದಿನೆರವಂಡ ನಾಚಪ್ಪ ತಿಳಿಸಿದರು.
ಸಮೀಪದ ಕೊಳಕೇರಿ ಗ್ರಾಮದ ಕಾವೇರಿ ಎಸ್ಟೇಟ್‍ನಲ್ಲಿ ಆಯೋಜಿಸ ಲಾಗಿದ್ದ 5ನೇ ವರ್ಷದ ತೋಕ್ ನಮ್ಮೆ (ಬಂದೂಕು ಉತ್ಸವ)ಯಲ್ಲಿ ಕೋವಿಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕೊಡವರಿಗೆ ಸಂವಿಧಾನಿಕ ಭದ್ರತೆ ಅಗತ್ಯವಾಗಿದೆ. ಕೊಡವರ ಹಕ್ಕಿನ ಬಗ್ಗೆ ಕೊಡವರಿಗಿಂತಲೂ ಕೊಡವ ವಿರೋಧಿಗಳಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದ ಅವರು, ತಮ್ಮ ಹಕ್ಕಿನ ಬಗ್ಗೆ ಎಲ್ಲಾ ಕೊಡವರು ತಿಳಿದು ಅದನ್ನು ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದರು.
ಕುಲ ಶಾಸ್ತ್ರೀಯ ಅಧ್ಯಯನ ಗಣತಿಯಿಂದ ಕೊಡವರು ಬುಡಕಟ್ಟು ಜನ ಎಂದು ಧÀೃಡಪಟ್ಟು ಘೋಷಣೆಯಾಗುತ್ತಿತ್ತು. ಆದರೆ ಇದನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಗಣತಿ ನಡೆಸಿ ಕೊಡವರಿಗೆ ಬುಡಕಟ್ಟು ಜನಾಂಗ ಸ್ಥಾನ ಮಾನ ದೊರೆಯಲಿದೆ.
ಕಪ್ಪು ಹಣ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಕ್ಕೂ ಸಿ.ಎನ್.ಸಿ. ಸಂಪೂರ್ಣ ಬೆಂಬಲ ನೀಡುತ್ತದೆ.
ತಾವು ಮಾಡಿದ ಅಕ್ರಮವನ್ನು ಮುಚ್ಚಿ ಹಾಕಲು ಹಲವರು ತನ್ನ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್
(ಮೊದಲ ಪುಟದಿಂದ) ಪಕ್ಷಗಳು ಕುಲ ಶಾಸ್ತ್ರೀಯ ಅಧ್ಯಯನ ಗಣತಿಯನ್ನು ಪುನರಾರಂಭಿಸಲು ಸರಕಾರಕ್ಕೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಸಾಂಕೇತಿಕವಾಗಿ ಧರಣಿ ನಡೆಸಿ ಹಕ್ಕೊತ್ತಾಯದ ಘೋಷಣೆ ಕೂಗಲಾಯಿತು. ಪುರುಷರು, ಮಹಿಳೆಯರು, ಮಕ್ಕಳು ಕೋವಿಯೊಂದಿಗೆ ಮೆರವಣಿಗೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೋಕ್ ನಮ್ಮೆ ಪ್ರಯುಕ್ತ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕವಾಗಿ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯನ್ನು ಏರ್ಪಡಿಸ ಲಾಗಿತ್ತು. ನಮ್ಮೆಯಲ್ಲಿ ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ರೀನಾ ನಾಣಯ್ಯ, ಅಪ್ಪಚ್ಚಿರ ಸುರೇಶ್, ಮಹೇಶ್, ಅಪ್ಪಾರಂಡ ಪ್ರಕಾಶ್, ಪ್ರಸಾದ್, ನಂಜಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಾಚಮಂಡ ಬೆಲ್ಲು, ಕಸ್ತೂರಿ, ಮತ್ತಿತರರಿದ್ದರು.