ಮಡಿಕೇರಿ, ಜ. 12: ಸಾಕಷ್ಟು ಬಾರಿ ನೋಡಿದರೂ ಮನಸ್ಸು ತಣಿಯದ ಅದ್ಭುತ ನೆಲ ಕೊಡಗು. ನಿಸರ್ಗದ ಜೊತೆ ಇಲ್ಲಿನ ಜನ, ವಿಭಿನ್ನ ಅನ್ನುವ ಕೊಡವರ ಸಂಸ್ಕøತಿ ತನಗೆ ಆಕರ್ಷಣೆಯಾಗಿತ್ತು. ಕುತೂಹಲಿಯಾದ ತನಗೆ ಇಲ್ಲಿನ ಜನರ ಜತೆಗೆ ಎಂದೂ ಮುಗಿಯದ ಮಾತು. ಅದರಲ್ಲಿಯೂ ಕಳೆದ ಹದಿನೆಂಟಕ್ಕೂ ಹೆಚ್ಚು ವರ್ಷಗಳಿಂದ ಜೊತೆಯಲ್ಲಿಯೇ ಕೆಲಸ ಮಾಡುವ ಬೆಲ್ಲು (ಬೆಳ್ಳಿಯಪ್ಪ ಚೆರುಮಂದಂಡ) ಅವರ ಒಡನಾಟ ಕೊಡಗನ್ನು ಮತ್ತಷ್ಟು ಹತ್ತಿರ ತಂದಿದೆ.

ಇಲ್ಲಿನ ಪರಿಸರ, ಕೇರಳದ ಮರದ ವ್ಯಾಪಾರಿಗಳು, ರೆಸಾರ್ಟ್‍ಗಳು, ಹೋಂ ಸ್ಟೇಗಳು. ದಿನೇ ದಿನೇ ಕಡಿಮೆಯಾಗುತ್ತಿರುವ ಗದ್ದೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದೇಶಕ್ಕೋಸ್ಕರ ಹೋರಾಡಿದ ಯೋಧರು ತಮ್ಮ ಸೇವೆ ಮುಗಿಸಿ ಹಿಂತಿರುಗಿದ ನಂತರ ಮತ್ತೆ ಅವರ ಬದುಕನ್ನು ಶೂನ್ಯದೊಂದಿಗೆ ಶುರು ಮಾಡಬೇಕಾದ ಪರಿಸ್ಥಿತಿ, ವಿಧಿಯಿಲ್ಲದೇ ಬದುಕು ಸಾಗಿಸಲು ಸೆಕ್ಯೂರಿಟಿ ಗಾರ್ಡ್‍ನಂತಹ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಹೆಚ್ಚು ಕಾಡಿತು. ಸಿನಿಮಾ ಮಾಧ್ಯಮದಲ್ಲಿ ಕೆಲಸ ಮಾಡುವ ತಾವೂ ಇದನ್ನು ಕೇಂದ್ರವಾಗಿರಿಸಿ ಚಲನಚಿತ್ರ ಯಾಕೆ ಮಾಡಬಾರದು ಎಂಬ ಆಲೋಚನೆ ಬಂದಾಗ ಹುಟ್ಟಿದ್ದು “ತೆಳ್Àಂಗ್ ನೀರ್”.

ಮಾಹಿತಿ ಸಂಗ್ರಹ, ಓದು, ಚರ್ಚೆಗಳು ಇವೆಲ್ಲವೂ ಚಿತ್ರ ತಯಾರಿಯ ಭಾಗವಾಗಿ ನಡೆಯುತ್ತಿರುವಾಗಲೇ ತಮಗೆ ಕಾಡಿದ್ದು ಕೊಡವ ಚಿತ್ರದ ಮಾರುಕಟ್ಟೆ. ಏನೇನೂ ಆಶಾದಾಯಕವಾಗಿಲ್ಲದ, ಭರವಸೆಯಿಲ್ಲದ ಪರಿಸ್ಥಿತಿ ಎದುರಾಯಿತು. ಆದರೆ ಚಿತ್ರದ ಬಗ್ಗೆ ಕಂಡ ಕನಸು, ಉತ್ಸಾಹ ಎಲ್ಲವನ್ನೂ ಎದುರಿಸೋಣ ಎಂಬ ಧೈರ್ಯ ತುಂಬಿತು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಸ್ನೇಹಿತರು ತಂತ್ರಜ್ಞರಿಗೆ ಪರಿಸ್ಥಿತಿ ವಿವರಿಸಿ ಅವರ ಸಹಕಾರ ಪಡೆದು ಕಡಿಮೆ ಜನರ ತಂಡ ಕಟ್ಟಿ ಚಿತ್ರಕ್ಕಾಗಿ 40 ದಿನಕ್ಕೂ ಹೆಚ್ಚು ಕಾಲ ಕೊಡಗಿನ ಸಾಕಷ್ಟು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆವು. ಆಗ ತಮ್ಮ ಕನಸಿಗೆ ನೆರವಂಡ ಉಮೇಶ್, ವಾಂಚಿರ ನಾಣಯ್ಯ, ಜಯಣ್ಣ, ತೇಲಪಂಡ ಪವನ್ ಮತ್ತ್ತು ಇನ್ನೂ ಹಲವರು ಸಹಕಾರ ನೀಡಿದ್ದರಿಂದಾಗಿ ‘ತೆಳ್‍ಂಗ್ ನೀರ್’ ಸುಸೂತ್ರವಾಗಿ ನಿರ್ಮಾಣವಾಯಿತು.

‘ತೆಳ್‍ಂಗ್ ನೀರ್’ ಚಿತ್ರವು 2015 ರ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನವಾದದ್ದಲ್ಲದೇ ಅಮೇರಿಕಾ ಮತ್ತು ಲಂಡನ್‍ಗಳ ಅನೇಕ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡು ಪ್ರದರ್ಶನಗೊಂಡಿದೆ. ಕೊಡವ ಚಿತ್ರವೊಂದು ವಿದೇಶಗಳಲ್ಲಿ ಪ್ರದರ್ಶನಗೊಂಡು ಚಲನಚಿತ್ರ ವಿಮರ್ಶಕರ, ಚಿತ್ರಪ್ರೇಮಿಗಳ ಮನಸೂರೆಗೊಂಡಿರುವದು ನಮಗೆಲ್ಲ ಹೆಮ್ಮೆಯ ವಿಚಾರ.. ಇದಕ್ಕೆ ಮುಖ್ಯ ಕಾರಣ ಕಥಾವಸ್ತು ಎಂಬದು ನಮ್ಮ ಅನಿಸಿಕೆ.

ಎಲ್ಲಾ ಸರಿ. ಚಿತ್ರವನ್ನು ಜನಗಳಿಗೆ ತಲಪಿಸುವ ಬಗ್ಗೆ ಹೇಗೆ? ಸಿನಿಮಾ ಮಾಡಿದ್ದಕ್ಕಿಂತಲೂ ಹೆಚ್ಚು ಕಾಡಿದ್ದು ಇದೇ ಪ್ರಶ್ನೆ. ಮಡಿಕೇರಿ ಪಟ್ಟಣದಲ್ಲಿ ಇರುವ ಒಂದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಗೆಳೆಯರೊಂದಿಗಿನ ಚರ್ಚೆಯ ನಂತರ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿಯ ಕೊಡವ ಸಮಾಜದ ಸಹಕಾರ, ಸಹಯೋಗದೊಂದಿಗೆ ತಾ. 15ರಂದು ಮಡಿಕೇರಿಯ ಟೌನ್‍ಹಾಲ್‍ನಲ್ಲಿ ಒಂದು ವಾರ ಕಾಲ ಪ್ರತಿದಿನ ಎರಡು ಶೋಗಳಂತೆ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನಂತರ ತಾಲೂಕು ಮಟ್ಟದಲ್ಲಿ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ಜನರಿಗೆ ತಲಪಿಸುವ ಆಲೋಚನೆ ಮಾಡಲಾಗಿದೆ. ಎಲ್ಲರÀ ಸಹಕಾರ ಪ್ರೀತಿಯನ್ನು ನಿರೀಕ್ಷಿಸುತ್ತಾ...