*ಗೋಣಿಕೊಪ್ಪಲು, ಸೆ. 10: ರಾಷ್ಟ್ರೀಯ ಸ್ವಯಂಸೇವಕ ಸಂಘ ತಿತಿಮತಿ ಶಾಖೆ ವತಿಯಿಂದ ಶ್ರೀರಾಮ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಸಲಾಯಿತು.

ಸಕಲಕಲ ವಲ್ಲಭÀ ಜಗದೋದ್ಧಾರಕನಾದÀ ಶ್ರೀ ಕೃಷ್ಣನು ಧರ್ಮದ ರಕ್ಷಣೆಗಾಗಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿ ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿದನು ಎಂದು ಸಭೆಯನ್ನು ಉದ್ದೇಶಿಸಿ ವನವಾಸಿ ಕಲ್ಯಾಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀಪಾದಜೀ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಲ್ಲ ಮಾತೆಯರು ತಮ್ಮ ಮನೆಗಳಲ್ಲಿ ವೀರ ಪುರುಷರ, ಮಾಹಾನುಭಾವರ ತ್ಯಾಗ-ಸಾಹಸದ ಕಥೆಗಳನ್ನು ಮಕ್ಕಳಿಗೆ ಹೇಳಿ ಕೊಡುವದರ ಮೂಲಕ ಮಕ್ಕಳಲ್ಲಿ ಆ ರೀತಿಯ ಗುಣಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಎಲ್ಲ ವೇಷಧಾರಿ ಪಟಾಣಿಗಳು ಶ್ರೀ ಕೃಷ್ಣನಂತೆ ಪರಾಕ್ರಮಿಗಳಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಶ್ರೀ ಕೃಷ್ಣ ವೇಷಧಾರಿ ಪುಟಾಣಿಗಳು, ಮಾತೆಯರು, ವಿವಿಧ ಶಾಲೆಯ ಶಿಕ್ಷಕರು, ಹಿಂದೂ ಬಾಂಧವರು ಭಾಗವಹಿಸಿದ್ದರು. ಮನು ನಂಜಪ್ಪ ಸ್ವಾಗತಿಸಿ, ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಗ್ರಾಮ ಪಂಚಾಯಿತಿ ಸದಸ್ಯ ಅನೂಪ್ ಕುಮಾರ್ ಮತ್ತು ಸ್ನೇಹಿತರು ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು. ಸುಭಾಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉದ್ಯಮಿ ನವೀನ್ ಮತ್ತು ಮಂಜು ಬಹುಮಾನ ನೀಡಿದರು. ಅನ್ನ ಸಂತರ್ಪಣಾ ಕಾರ್ಯ ನಡೆಯಿತು. - ಎನ್.ಎನ್. ದಿನೇಶ್