ಮಡಿಕೇರಿ, ಸೆ.29 : ಒಂದು ರಾಜಕೀಯ ಪಕ್ಷ ಎಲ್ಲರಿಗೂ ಎಲ್ಲಾ ಸ್ಥಾನಮಾನಗಳನ್ನು ನೀಡಲು ಸಾಧ್ಯವಿಲ್ಲ. ತಾಳ್ಮೆಯಿಂದ ಪಕ್ಷ ಕಟ್ಟುವದಕ್ಕೆ ದುಡಿದಾಗ ಮಾತ್ರ ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಮಡಿಕೇರಿ ನಗರ ಕಾಂಗ್ರೆಸ್‍ನ ಸಭೆÉ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆÉಯಲ್ಲಿ ಪಾಲ್ಗೊಂಡು ಮಾತನಾಡಿದ ಟಿ.ಪಿ. ರಮೇಶ್, ಕಾಂಗ್ರೆಸ್ ಪಕ್ಷಕ್ಕೆ ಮಡಿಕೇರಿ ನಗರದಲ್ಲಿ ಹೊಸ ಹುರುಪು ಬಂದಿದ್ದು, ಕಾರ್ಯಕರ್ತರು ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕಾರ್ಯಕರ್ತರು ತಾಳ್ಮೆಯಿಂದ ಪಕ್ಷಕ್ಕಾಗಿ ದುಡಿದಾಗ ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಎನ್ನುವದಕ್ಕೆ ತಾವೇ ಉದಾಹರಣೆಯೆಂದ ರಮೇಶ್, ಕೊಡಗಿನಲ್ಲಿ ಕಾಂಗ್ರೆಸ್ ಪ್ರಬಲವಾಗಿ ಬೆಳೆಯುತ್ತಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು. ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಸೇರ್ಪಡೆ ಗೊಳ್ಳುತ್ತಿದ್ದು, ಪಕ್ಷದಲ್ಲಿ ಹೊಸ ಹುರುಪು ತುಂಬಿದೆ ಎಂದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಯ್ಯಪ್ಪ, ನಗರಸಭಾ ಸದಸ್ಯರಾದ ಹೆಚ್.ಎಂ. ನಂದ ಕುಮಾರ್, ಜುಲೇಕಾಬಿ, ಪ್ರಕಾಶ್ ಆಚಾರ್ಯ, ಚುಮ್ಮಿ ದೇವಯ್ಯ, ಲೀಲಾ ಶೇಷಮ್ಮ, ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಾಮ ನಿರ್ದೇಶಿತ ಸದಸ್ಯ ರಾದ ಉಸ್ಮಾನ್, ಅಲ್ಪಸಂಖ್ಯಾತರ ಘಟಕದ ಕೆ.ಇ. ಮ್ಯಾಥ್ಯು, ಮೂಡಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಪ್ರಮುಖರಾದ ರೆಹಮಾನ್, ಮೊಣ್ಣಪ್ಪ, ಹೆಚ್.ಬಿ. ಚಂದ್ರು, ಯತೀಶ್ ಕುಮಾರ್, ಕೆ.ಎಂ. ಆನಂದ್, ಎಂ.ಎಂ. ಹನೀಫ್, ಸದಾ ಮುದ್ದಪ್ಪ, ಸುನಿಲ್ ನಂಜಪ್ಪ, ಸ್ವರ್ಣಲತಾ, ನಾಣಯ್ಯ, ಲತೀಫ್, ಲತೀಫ್, ಪ್ರಭು ರೈ ಮತ್ತಿತರರು ಉಪಸ್ಥಿತರಿದ್ದರು.

ಮಡಿಕೇರಿ ನಗರ ದಸರಾ ಜನೋತ್ಸವಕ್ಕೆ ಮುಖ್ಯಮಂತ್ರಿಗಳು 75 ಲಕ್ಷ ರೂ. ಅನುದಾನ ಕಲ್ಪಿಸಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಟಿ.ಪಿ. ರಮೇಶ್ ಅವರಿಗೆ ಸಭೆ ಅಭಿನಂದನೆ ಸಲ್ಲಿಸಿತು.

ಪದಾಧಿಕಾರಿಗಳ ಆಯ್ಕೆ

ಇದೇ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಎಂ.ಸುದಯ್ ನಾಣಯ್ಯ, ಎಂ.ಎಸ್. ಸುಬ್ರಮಣಿ, ಹೆಚ್.ಬಿ. ವಿಜಯ, ಎಂ.ಹೆಚ್. ಜಫ್ರುಲ್ಲ, ಬಿ.ಜಿ. ಮೋಹನ್, ಎಂ.ಕೆ. ಸುನಿಲ್ ನಂಜಪ್ಪ, ಆನಂದ್, ಕಿಶನ್ ಪೂವಯ್ಯ, ಟಿ.ಪಿ. ರಾಜೇಂದ್ರ, ನಿತ್ತಿ ರೈ ಪಾಂಡ್ಯ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಎನ್. ವಸಂತ್ ಭಟ್, ಮುನೀರ್ ಮಾಚಾರ್, ಕೆ.ಕೆ. ಉತ್ತಪ್ಪ, ಪ್ರಭು ರೈ, ಹೆಚ್.ಬಿ. ಚಂದ್ರು, ವಿನೋದ್, ರಮಾಮಣಿ, ಎಂ. ಹನೀಫ್, ಸಿ.ಸಿ. ಕಾವೇರಪ್ಪ, ಬಿ.ಎ. ದೇವಯ್ಯ, ಕಾರ್ಯದರ್ಶಿ ಗಳಾಗಿ ಸದಾ ಮುದ್ದಪ್ಪ, ಲಕ್ಷ್ಮೀ ಪ್ರಸಾದ್, ಎಂ.ಬಿ.ಕೌಸರ್, ಶ್ರೀ ಪೆರ್ಲ, ನಿರಂಜನ್, ಖಜಾಂಚಿಯಾಗಿ ಅತೀಕ್, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಎಂ.ಹೆಚ್.ಬಷೀರ್, ಇಬ್ರಾಹಿಂ, ಇಸ್ಮಾಯಿಲ್, ಮಂಜುನಾಥ್, ಫಯಾಜ್, ಮಸೂದ್ ಅಹಮ್ಮದ್, ಎಂ.ಎಂ. ಮುಸ್ತಫ, ಜಗದೀಶ್, ಎಂ. ಮೊಹಮ್ಮದ್, ಶೇಕ್ ಅಹಮ್ಮದ್, ಶೇಖ್ ರಿಜ್ವಾನ್, ಜಾಹಿರ್, ನಗರ ಸಲಹಾ ಸಮಿತಿ ಪದಾಧಿಕಾರಿ ಗಳಾಗಿ ಟಿ.ಎಂ. ಅಯ್ಯಪ್ಪ, ಕೆ.ಎ. ಮುದ್ದಪ್ಪ, ಕೆ.ಇ. ಮ್ಯಾಥ್ಯು, ನವೀನ್ ಕುಶಾಲಪ್ಪ, ಎಂ.ಜಿ. ಮುಕ್ತಾರ್, ಫೈಝಿಲ್, ಎಂ.ಪಿ. ಕೃಷ್ಣರಾಜು, ಎಂ.ಎ. ಹನೀಫ್, ಬಿ.ಎ. ರಾಮಯ್ಯ, ಕೆ.ಎ, ಆನಂದ, ಎ.ಜಿ. ರಮೇಶ್, ಯೂಸೂಫ್, ಕಾನೆಹಿತ್ಲು ಮೊಣ್ಣಪ್ಪ, ಪಿ.ಕೆ. ಜಗದೀಶ್ ಆಯ್ಕೆಯಾಗಿದ್ದು, ನಗರಸಭೆಯ ಅಧ್ಯಕ್ಷರು, ನಗರಸಭೆಯ ಕಾಂಗ್ರೆಸ್ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಖಾಯಂ ಆಹ್ವಾನಿತ ಸದಸ್ಯರಾಗಿರುತ್ತಾರೆ ಎಂದು ಇದೇ ಸಂದರ್ಭ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ತಿಳಿಸಿದರು.