ಮಡಿಕೇರಿ, ಆ.23: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗುತ್ತಿದೆ.
ತಾ. 27 ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ತಾ. 29 ರಂದು ಪೊನ್ನಂಪೇಟೆ ತಾಲೂಕು ಮಿನಿ ಕ್ರೀಡಾಂಗಣ, ಹಾಗೂ ತಾ. 30 ರಂದು ಕೂಡಿಗೆಯ ಕ್ರೀಡಾ ಶಾಲೆ ಹಾಗೂ ಡಯಟ್ ಆಟದ ಮೈದಾನದಲ್ಲಿ ನಡೆಯಲಿದೆ.
ಆಸಕ್ತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ದೂ.ಸಂ 08272-228985 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.
ಕ್ರೀಡೆಗಳ ವಿವರ ಇಂತಿದೆ: ಪುರುಷರ ವಿಭಾಗದ ಆಥ್ಲೇಟಿಕ್ಸ್ ಸ್ಪರ್ಧೆಗಳಲ್ಲಿ 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡುಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಎಸೆತ, ಡಿಸ್ಕಸ್ ಎಸೆತ, 110 ಮೀ ಹರ್ಡಲ್ಸ್, 4ಘಿ100 ಮೀ ರಿಲೇ, 4ಘಿ400 ಮೀ. ರಿಲೇ ಓಟ.
ಗುಂಪು ಸ್ಪರ್ಧೆಗಳಲ್ಲಿ ಜಿಮ್ನಾಸ್ಟಿಕ್, ಈಜು, ವಾಲಿವಾಲ್, ಕಬಡ್ಡಿ, ಖೋಖೋ, ಷಟಲ್ ಬ್ಯಾಡ್ಮಿಂಟನ್, ಬಾಸ್ಕೇಟ್‍ಬಾಲ್, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್(ಸಿಂಗಲ್ಸ್) ಮತ್ತು(ಡಬಲ್ಸ್), ಟೆನ್ನಿಸ್(ಸಿಂಗಲ್ಸ್) ಮತ್ತು (ಡಬಲ್ಸ್), ಫುಟ್ಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ನೆಟ್‍ಬಾಲ್ ಹಾಗೂ ಹಾಕಿ.
ಮಹಿಳೆಯರ ವಿಭಾಗದ ಆಥ್ಲೇಟಿಕ್ಸ್ ಸ್ಪರ್ಧೆಗಳಲ್ಲಿ 100ಮೀ, 200ಮೀ, 400ಮೀ, 800ಮೀ, 1500ಮೀ, 3000ಮೀ ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡುಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಎಸೆತ, ಡಿಸ್ಕಸ್ ಎಸೆತ, 100 ಮೀ ಹರ್ಡಲ್ಸ್, 4ಘಿ100 ಮೀ ರಿಲೇ, 4ಘಿ400 ಮೀ ರಿಲೇ ಓಟ,
ಮಹಿಳೆಯರ ಗುಂಪು ಸ್ಪರ್ಧೆಗಳಲ್ಲಿ ಜಿಮ್ನಾಸ್ಟಿಕ್, ಈಜು, ವಾಲಿವಾಲ್, ಕಬಡ್ಡಿ, ಖೋಖೋ, ಹಾಕಿ, ಬಾಸ್ಕೇಟ್‍ಬಾಲ್, ಷಟಲ್ ಬ್ಯಾಡ್ಮಿಂಟನ್, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್ (ಸಿಂಗಲ್ಸ್) ಮತ್ತು (ಡಬಲ್ಸ್), ಟೆನ್ನಿಸ್(ಸಿಂಗಲ್ಸ್) ಮತ್ತು (ಡಬಲ್ಸ್), ಬಾಲ್ ಬ್ಯಾಡ್ಮಿಂಟನ್, ನೆಟ್‍ಬಾಲ್ ಹಾಗೂ ಥ್ರೋಬಾಲ್ ಕ್ರೀಡೆಗಳು ನಡೆಯಲಿದೆ.