*ಮೂರ್ನಾಡು, ಸೆ. 29: ಜೀವನದಲ್ಲಿ ಆರೋಗ್ಯ ಎಲ್ಲದಕ್ಕಿಂತ ಮುಖ್ಯ ಆದುದರಿಂದ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮಡಿಕೇರಿಯ ದೈ.ಶಿ. ಪರಿವೀಕ್ಷಕ ಎ. ಮೃತ್ಯುಂಜಯ ಕರೆÀ ನೀಡಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಾರುತಿ ಸಂಯುಕ್ತ ಪ್ರೌಢಶಾಲೆ ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಕೆ.ಅಪ್ಪಚ್ಚು ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾ.ದೈ.ಶಿ ಸಂಘದ ಅಧ್ಯಕ್ಷ ಸಿ.ಕೆ ತಿಮ್ಮಯ್ಯ ಹಾಗೂ ಜಿ.ದೈ.ಶಿ. ಸಂಘದ ಉಪಾಧ್ಯಕ್ಷ ನಾಗಯ್ಯ ಶೆಟ್ಟಿ ಮಾತನಾಡಿ, ಶಿಸ್ತಿನಿಂದ ಕಾರ್ಯಕ್ರಮ ನಡೆಸಿಕೊಟ್ಟ ಮಾರುತಿ ವಿದ್ಯಾಸಂಸ್ಥೆಯ ಎಲ್ಲರನ್ನೂ ಅಭಿನಂದಿಸಿದರು.
ವೇದಿಕೆಯಲ್ಲಿ ಜಿ.ದೈ.ಶಿ. ಸಂಘದ ಗೌ. ಅಧ್ಯಕ್ಷ ಪಿ.ಎಸ್ ಮಾಚಯ್ಯ, ಮಾರುತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಜಿ.ದೇವಯ್ಯ, ಉಪಾಧ್ಯಕ್ಷ ಬಿ.ಎಂ.ಅರುಣ್ ಅಪ್ಪಚ್ಚು, ನಿರ್ದೇಶಕ ಗಿಲ್ ಸೋಮಯ್ಯ, ಪ್ರಾಂಶುಪಾಲೆ ರಾಣಿ ಅಪ್ಪಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳನ್ನು ಮುತುವರ್ಜಿಯಿಂದ ನಡೆಸಿಕೊಟ್ಟ ಮಾರುತಿ ವಿದ್ಯಾಸಂಸ್ಥೆಯ ದೈ. ಶಿಕ್ಷಕಿ ಸುಶೀಲ್‍ಗೆ ಸನ್ಮಾನ ಸಮಾರಂಭ ಹಾಗೂ ಕ್ರೀಡಾ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಮಾರುತಿ ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ದಿವ್ಯ ಪ್ರಾರ್ಥಿಸಿ, ಕುಸುಮ ನಿರೂಪಿಸಿದರೆ ರಾಜಶ್ರೀ ಸ್ವಾಗತಿಸಿ, ಹೇಮಾವತಿ ವಂದಿಸಿದರು.