ವೀರಾಜಪೇಟೆ, ನ. 12: ವೀರಾಜಪೇಟೆ ನೆಹರೂ ನಗರದ ನವಜ್ಯೋತಿ ಯುವಕ ಸಂಘದಿಂದ ಡಿಸೆಂಬರ್ 3 ಮತ್ತು 4ರಂದು ಇಲ್ಲಿನ ತಾಲೂಕು ಮೈದಾನದಲ್ಲಿ ತಾಲೂಕು ಮಟ್ಟದ ಟೈಗರ್ ಫೈವ್ ಕಾಲ್ಚೆಂಡು ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಸುನೀಶ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುನೀಶ್ ಅವರು ಸಂಘದ 27ನೇ ವಾರ್ಷಿಕೋತ್ಸವದ ಪ್ರಯುಕ್ತ “ನವ ಜ್ಯೋತಿ ಕಪ್ 2016” ಈ ಪಂದ್ಯಾಟ ಏರ್ಪಡಿಸಲಾಗಿದ್ದು, ಆಸಕ್ತರು ತಾ. 22ರೊಳಗೆ ತಂಡದ ಹೆಸರುಗಳನ್ನು ರೂ 700 ನಗದು ಪಾವತಿಸಿ ನೋಂದಾಯಿಸಿ ಕೊಳ್ಳಬಹುದು ಎಂದರು.

ಸಂಘದ ಮಾಜಿ ಅಧ್ಯಕ್ಷ ಜೂಡಿ ವಾಝ್ ಮಾತನಾಡಿ, ತಂಡಗಳು ಪಾಪ್ಯುಲರ್ ಆಟೋಮೊಬೈಲ್ಸ್ ಮಲಬಾರ್ ರಸ್ತೆ ಮೊ. 9902650035, ಮೂಕಾಂಬಿಕಾ ಎಂಟರ್ ಪ್ರೈಸಸ್ ಖಾಸಗಿ ಬಸ್ಸು ನಿಲ್ದಾಣ ವೀರಾಜಪೇಟೆ ಮೊ. 9844558535 ಸಂಪರ್ಕಿಸಬಹುದು ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಎಂ.ಎಂ.ಮುನ್ನಾ, ಕೆ.ಕೆ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.