ಮಡಿಕೇರಿ, ಅ. 18: 2016ನೇ ಸಾಲಿನ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಇಲಾಖಾ ವತಿಯಿಂದ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊಡಗು ಜಿಲ್ಲಾ ಮಟ್ಟದ ರಸ್ತೆ ಓಟವನ್ನು ತಾ. 27 ರಂದು ಬೆಳಿಗ್ಗೆ 6.30 ಗಂಟೆಗೆ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಏರ್ಪಡಿಸಲಾಗಿದೆ.

ರಸ್ತೆ ಓಟದ ವಿವರ: ಪ್ರಾಥಮಿಕ ಶಾಲಾ ಬಾಲಕ/ ಬಾಲಕಿಯರಿಗೆ (3ನೇ ತರಗತಿಯಿಂದ 5ನೇ ತರಗತಿ ವರೆಗೆ) 1ಕಿ.ಮೀ. ಓಟ (ತಿಮ್ಮಯ್ಯ ವೃತ್ತದಿಂದ ಈಸ್ಟ್ ಎಂಡ್ ಪೆಟ್ರೋಲ್ ಬಂಕ್), ಹಿರಿಯ ಪ್ರಾಥಮಿಕ ಶಾಲಾ ಬಾಲಕ/ಬಾಲಕಿಯರಿಗೆ (6ನೇ ತರಗತಿಯಿಂದ 7ನೇ ತರಗತಿ ವರೆಗೆ) 2.00 ಕಿ.ಮೀ. ಓಟ (ಕೆ.ಎಸ್.ಆರ್.ಟಿ.ಸಿ ಡಿಪೋದಿಂದ ತಿಮ್ಮಯ್ಯ ವೃತ್ತದವರೆಗೆ), ಫ್ರೌಢ ಶಾಲಾ ಬಾಲಕ /ಬಾಲಕಿಯರಿಗೆ (8ನೇ ತರಗತಿಯಿಂದ 10ನೇ ತರಗತಿ ವರೆಗೆ) 4 ಕಿಮೀ ಓಟ (ಸುದರ್ಶನವೃತ್ತದಿಂದ ತಿಮ್ಮಯ್ಯ ವೃತ್ತದವರೆಗೆ), ಸಾರ್ವಜನಿಕ ಮಹಿಳೆಯರಿಗೆ-5 ಕಿ.ಮೀ. ಓಟ (ತಿಮ್ಮಯ್ಯ ವೃತ್ತದಿಂದ-ಕೊಡಗು ವಿದ್ಯಾಲಯ), ಸಾರ್ವಜನಿಕ ಪುರುಷರಿಗೆ-10 ಕಿ.ಮೀ. ಓಟ (ತಿಮ್ಮಯ್ಯ ವೃತ್ತದಿಂದ - ಕ್ಯಾಪಿಟಲ್ ವಿಲೇಜ್) ಸ್ಪರ್ಧೆ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ ತಿಳಿಸಿದ್ದಾರೆ.