ಮಡಿಕೇರಿ, ಜ. 9 : ಗ್ರಾಮೀಣಾಭಿವೃದ್ಧಿ ಸೇರಿದಂತೆ ಕ್ರೀಡೆ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಇಪ್ಪತ್ತೈದು ವಸಂತಗಳನ್ನು ಪÀÇರೈಸಿರುವ ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಲದ ರಜತ ಮಹೋತ್ಸವದ ಸಮಾರೋಪ ತಾ.21 ರಿಂದ 23 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಗಿರೀಶ್ ತಾಳತ್ತ್ಮನೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಆರಂಭಿಕ ದಿನವಾದ ಜ.21 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ ಆರಂಭಗೊಳ್ಳುವ ಪಂದ್ಯಾವಳಿ ಆಹೋರಾತ್ರಿ ನಡೆಯಲಿದ್ದು, ಮರುದಿನ ಬೆಳಿಗ್ಗೆ ಪÀÇರ್ಣಗೊಳ್ಳುತ್ತದೆಂದು ತಿಳಿಸಿದರು.
ರಾಜ್ಯ ವಾಲಿಬಾಲ್ ವಿಜೇತ ತಂಡಕ್ಕೆ 30 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 20 ಸಾವಿರ, ತೃತೀಯ 10 ಸಾವಿರ ರೂ. ಮತ್ತು ಚತುರ್ಥ ಸ್ಥಾನ ಪಡೆಯುವ ತಂಡಕ್ಕೆ 5 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ ಎಂದರು.
ಬೆಳ್ಳಿ ಮಹೋತ್ಸವದ ದ್ವಿತೀಯ ದಿನವಾದ ಜ.22 ರಂದು ರಾಜ್ಯ ಮಟ್ಟದ ಸಾಂಸ್ಕøತಿಕ ಮೇಳವನ್ನು ಆಯೋಜಿಸಲಾಗಿದೆ. ಇದನ್ನು ಯಶಸ್ವಿಗೊಳಿಸುವದಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷಾ ಸಾಹಿತ್ಯ ಅಕಾಡೆಮಿ, ತುಳು ಭಾಷಾ ಅಕಾಡೆÉಮಿ, ಬ್ಯಾರಿ ಭಾಷಾ ಅಕಾಡೆಮಿ, ಕೊಂಕಣಿ ಭಾಷಾ ಅಕಾಡೆಮಿಗಳ ಸಹಕಾರವನ್ನು ಪಡೆದುಕೊಳ್ಳಲಾಗಿದೆ. ಪ್ರತಿ ಅಕಾಡೆಮಿಯ ತಲಾ ಮೂರು ಕಲಾ ತಂಡಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಲಿವೆ ಎಂದು ತಿಳಿಸಿದರು.
ಮಿನಿ ಮ್ಯಾರಥಾನ್-ಥ್ರೋಬಾಲ್- ಬೆಳ್ಳಿ ಮಹೋತ್ಸವದ ಕೊನೆಯ ದಿನವಾದ ಜ.23 ರಂದು ವಿಶೇಷವಾಗಿ ಮಿನಿ ಮ್ಯಾರಥಾನ್ ಮತ್ತು ಅಂತರ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಯುವಕರ ವಿಭಾಗದ ಮಿನಿ ಮ್ಯಾರಥಾನ್ ಅಂದು ಬೆಳಿಗ್ಗೆ ಕೊಟ್ಟೂರು ದೇವಸ್ಥಾನದಿಂದ ಆರಂಭಗೊಂಡು ತಾಳತ್ಮನೆ ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ಮಹಿಳೆಯರ ವಿಭಾಗದ ಮಿನಿ ಮ್ಯಾರಥಾನ್ ಬೆಟ್ಟಗೇರಿ-ನಾಪೆÀÇೀಕ್ಲು ಜಂಕ್ಷನ್ನಿಂದ ಆರಂಭಗೊಂಡು ತಾಳತ್ಮನೆ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆಯೆಂದು ಗಿರೀಶ್ ತಾಳತ್ಮನೆ ತಿಳಿಸಿದರು.
ಯುವಕರ ವಿಭಾಗದ ಮಿನಿ ಮ್ಯಾರಥಾನ್ನಲ್ಲಿ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ 4 ಸಾವಿರ, ತೃತೀಯ 3 ಸಾವಿರ, ಚತುರ್ಥ 2 ಸಾವಿರ ಮತ್ತು ಐದನೇ ಸ್ಥಾನ ಪಡೆಯುವವರಿಗೆ 1 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.ಯುವತಿಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 4 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ , ಚತುರ್ಥ 1 ಸಾವಿರ ಮತ್ತು ಐದನೇ ಸ್ಥಾನ ಪಡೆಯುವವರಿಗೆ 500 ರೂ. ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ 10 ಸಾವಿರ ನಗದು, ದ್ವಿತೀಯ ಬಹುಮಾನವಾಗಿ 7 ಸಾವಿರ, ತೃತೀಯ 5 ಸಾವಿರ ಮತ್ತು ನಾಲ್ಕನೇ ಬಹುಮಾನವಾಗಿ 3 ಸಾವಿರ ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಗಿರೀಶ್ ತಾಳತ್ಮನೆ ತಿಳಿಸಿದರು. ಪಂದ್ಯಾವಳಿಯ ಬಳಿಕ ಬೆಳ್ಳಿ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಮರಣ ಸಂಚಿಕೆಯನ್ನು ಕೂಡ ಅನಾವರಣಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಎಂ.ಎ. ಮಹಮ್ಮದ್ ರಫೀಕ್, ಸಹ ಸಂಚಾಲಕ ಎ.ಆರ್. ನೇತ್ರಾವತಿ, ಕಾರ್ಯದರ್ಶಿ ಬಿ.ಬಿ. ದಿನೇಶ್ ರೈ, ಹಣಕಾಸು ಸಮಿತಿ ಸಂಚಾಲಕ ಕೆ.ಕೆ. ಗಣೇಶ್, ಸ್ಮರಣ ಸಂಚಿಕೆ ಅಧ್ಯಕ್ಷÀ ಶ್ರೀಪತಿ ಹಾಗೂ ಯುವತಿ ಮಂಡಳಿ ಉಪಾಧ್ಯಕ್ಷೆ ಮಂಜುಳಾ ಆನಂದ ಉಪಸ್ಥಿತರಿದ್ದರು.