*ಗೋಣಿಕೊಪ್ಪಲು, ಅ.3 : ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ 3ನೇ ವರ್ಷದ ಅದ್ಧೂರಿ ಮಹಿಳಾ ದಸರಾವನ್ನು ತಾ.7 ರಂದು ಆಯೋಜಿಸ ಲಾಗಿದೆ ಎಂದು ಶ್ರೀ ಕಾವೇರಿ ಮಹಿಳಾ ದಸರಾ ಸಮಿತಿಯ ಕಾರ್ಯಾಧ್ಯಕ್ಷೆ ಕೊಣಿಯಂಡ ಬೋಜಮ್ಮ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9.30 ಗಂಟೆಗೆ ಪಾಲಿಬೆಟ್ಟ ರಸ್ತೆಯ ತಿರುವಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಲಸದೊಂದಿಗೆ ಮಹಿಳೆಯರು ಗೋಣಿಕೊಪ್ಪಲಿನ ರಾಜಬೀದಿಯಲ್ಲಿ ಮೆರವಣಿಗೆ ಹೊರಟು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಹತ್ತಿರದ ರಸ್ತೆಯಲ್ಲಿ ಸಾಗಿ ಮೈದಾನದಲ್ಲಿ ನಿರ್ಮಿಸಲಾದ ಕಾವೇರಿ ದಸರಾ ಸಮಿತಿಯ ಕಲಾ ವೇದಿಕೆಯಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಮಹಿಳಾ ದಸರಾ ನಡೆಯಲಿದ್ದು, ವೀರಾಜಪೇಟೆ ತಾಲೂಕಿನ ವಿವಿಧ ಮಹಿಳಾ ಸಂಘ-ಸಂಸ್ಥೆ ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವೇದಿಕೆಯಲ್ಲಿ ನಡೆಯುವ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಫ್ಯಾನ್ಸಿ ಡ್ರೆಸ್, ಪಿಕ್ ಅಂಡ್ ಆ್ಯಕ್ಟ್, ಮ್ಯೂಸಿಕ್ ಅಂಡ್ ಆ್ಯಕ್ಟ್, 6 ಸೀರೆಗಳ ಲಕ್ಕಿಡಿಪ್ ಹಾಗೂ ಸೀರೆಗಳ ನಿಖರ ಬೆಲೆ ಸೇರಿದಂತೆ ವಾಲಗತ್ತಾಟ್ ಪೈಪೋಟಿ ನಡೆಯಲಿದೆ.
ಮೈದಾನದಲ್ಲಿ ಹಗ್ಗಜಗ್ಗಾಟ, ಲೆಮನ್ ಅಂಡ್ ಸ್ಪೂನ್, ಬಕೆಟ್ಗೆ ಚೆಂಡು ಹಾಕುವ ಸ್ಪರ್ಧೆ, ಬಾಂಬಿಂಗ್ ದ ಸಿಟಿ, ಭಾರದ ಗುಂಡು ಎಸೆತ. ಪಾಸಿಂಗ್ ಬಾಲ್ ಸೇರಿದಂತೆ ಇನ್ನಿತರ ಕಾರ್ಯಕ್ರಮ ವನ್ನು ಆಯೋಜಿಸ ಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀ ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ನಡೆಯುವ ಮಹಿಳಾ ದಸರಾ ಅಧ್ಯಕ್ಷರಾಗಿ ಎಂ.ಸೆಲ್ವಿ, ಗೌರವಾಧ್ಯಕ್ಷರಾಗಿ ಸುಮಿ ಸುಬ್ಬಯ್ಯ, ಸಂಚಾಲಕರಾಗಿ ರೀನಾ ರಾಜೀವ್, ಉಪಾಧ್ಯಕ್ಷರಾಗಿ ರತಿ ಅಚ್ಚಪ್ಪ ಹಾಗೂ ಕಾವ್ಯ ಅಶ್ವಥ್, ಪ್ರಧಾನ ಕಾರ್ಯದರ್ಶಿಯಾಗಿ ರಾಣಿ ನಾರಾಯಣ್, ಕಾರ್ಯದರ್ಶಿಗಳಾಗಿ ಬೀನಾ ಸುರೇಶ್ ಹಾಗೂ ಎಸ್.ಧನಲಕ್ಷ್ಮಿ ಖಜಾಂಚಿಯಾಗಿ ಮಚ್ಚಮಾಡ ಅನಿತಾ ಚಂಗಪ್ಪ, ನಿರ್ದೇಶಕರುಗಳಾಗಿ ವಾಣಿ ಅಶೋಕ್, ಸಾವಿತ್ರಿ, ಸರಳಾ ಮಣಿಲಾಲ್, ಯಶೋಧ ಚಂದ್ರಶೇಕರ್, ವಿಮಲ, ಲಿಸ್ಸಿ ರಾಜೇಶ್, ತಾರಾ ವಿಶ್ವನಾಥ್, ಸುಶಿ, ಪೂಜಾ ಕರುಂಬಯ್ಯ, ಯಾಸ್ಮೀನ್, ಮಮಿತಾ ಮನೋಜ್, ಪ್ರಭಾವತಿ, ಮಂಜುಳ, ಧನಲಕ್ಷ್ಮಿ ಹಾಗೂ ಶಾಹೀನ ಸಮಿತಿಯಲ್ಲಿದ್ದು, ಮೆರವಣಿಗೆಯಲ್ಲಿ ಚಿಂಗಾರಿಮೇಳ, ಬೊಂಬೆಯಾಟ ಸೇರಿದಂತೆ ವಿವಿಧ ಕಲಾ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8277387227, 9880890647 ಹಾಗೂ 9845676881 ಸಂಪರ್ಕಿಸಲು ಕೋರಿದ್ದಾರೆ.
ಗೋಷ್ಠಿಯಲ್ಲಿ ಅಧ್ಯಕ್ಷೆ ಸೆಲ್ವಿ, ಗೌರವಾಧ್ಯಕ್ಷೆ ಸುಮಿ ಸುಬ್ಬಯ್ಯ, ಸಂಚಾಲಕಿ ರೀನಾ ರಾಜೀವ್, ಉಪಾಧ್ಯಕ್ಷೆ ರತಿ ಅಚ್ಚಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಣಿ ನಾರಾಯಣ್, ಅನಿತಾ ಚಂಗಪ್ಪ, ಸರಳ ಉಪಸ್ಥಿತರಿದ್ದರು.