ಸುಂಟಿಕೊಪ್ಪ, ಸೆ. 30 ಗೋ ಮಾತೆಯನ್ನು ಇಂದು ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಅದರ ವಂಶವನ್ನು ಉಳಿಸುವದಕ್ಕೆ ಸಾಧ್ಯವಾಗುವದಿಲ್ಲ ಎಂಬ ದೃಷ್ಟಿಯಿಂದ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನವು ಗೋ-ಕಿಂಕರ ಯಾತ್ರೆಯನ್ನು ಆಯೋಜಿಸಿದೆ. ಕಾಸರಗೋಡುವಿನ ಮಧೂರು ಪುಣ್ಯ ಕ್ಷೇತ್ರದಿಂದ ಹೊರಡಲಿರುವ ಗೋ-ಕಿಂಕರ ಯಾತ್ರೆಯು ತಾ. 4 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಕನ್ನಡ ವೃತ್ತಕ್ಕೆ ಆಗಮಿಸಲಿದೆ. ಸಮಸ್ತ ಗೋ ಪ್ರೇಮಿಗಳು ಈ ಯಾತ್ರೆಯಲ್ಲಿ ಭಾಗವಹಿಸಿ ಗೋವಿನ ಉಳಿವಿಗಾಗಿ ಎಲ್ಲರೂ ಕಾರ್ಯಪ್ರವೃತ್ತ ರಾಗಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಮನವಿ ಮಾಡಿದ್ದಾರೆ.