ಮಡಿಕೇರಿ, ಆ. 2: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬೇಲ್‍ನಮ್ಮೆ (ಕೃಷಿ ಹಬ್ಬ) ಎಂಬ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಕೊಡವ, ಕೊಡವ ಭಾಷಿಕ ಜನಾಂಗದ ಆಚಾರ-ವಿಚಾರ, ಪದ್ಧತಿ-ಪರಂಪರೆಗೆ ಸಂಬಂಧಿಸಿದ ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಭತ್ತದ ಕೃಷಿ ಚಟುವಟಿಕೆ ಮೂಲೆ ಗುಂಪಾಗುತ್ತಿದ್ದು, ಇದನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಹಾಗೂ ಕೊಡಗಿನ ಪದ್ಧತಿ-ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಯುವಕ, ಯುವತಿಯರಿಗೆ ಹಾಗೂ ಮುಂದಿನ ಪೀಳಿಗೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಮೂಡಿಸುವದಾಗಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಪ್ರತಿವರ್ಷ ಬೇರೆ ಬೇರೆ ಕಡೆ ಬೇಲ್‍ನಮ್ಮೆ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಾಪೋಕ್ಲುವಿನ ಬಿದ್ದಾಟಂಡ ಕುಟುಂಬದ ಬುಟ್ಟಿಆಕತೆಂವ (ಗದ್ದೆ)ಯಲ್ಲಿ ತಾ. 14 ರಂದು ಬೆಳಿಗ್ಗೆ 9.30 ರಿಂದ ಬೇಲ್ ನಮ್ಮೆ ನಡೆಯಲಿದೆ. ಇದರಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ವಿವಿಧ ಸ್ಪರ್ಧೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಎಲ್ಲಾ ತರಬೇತಿ, ಸ್ಪರ್ಧಾ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮಗಳಿಗೆ ತಮ್ಮ ಶಾಲಾ-ಕಾಲೇಜಿನಿಂದ ಸೂಚಿಸಿದ ಸಂಖ್ಯೆಯ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಅವರ ಹೆಸರು ಹಾಗೂ ಶಾಲಾ ದೃಢೀಕರಣದೊಂದಿಗೆ ವಿವರಗಳನ್ನು ತಾ. 10 ರೊಳಗೆ ಅಕಾಡೆಮಿ ಕಚೇರಿಗೆ ಅಥವಾ ಬಿದ್ದಾಟಂಡ ಮುದ್ದಯ್ಯ ಕ್ಲಾತ್ ಮರ್‍ಚೆಂಟ್, ಮುಖ್ಯರಸ್ತೆ, ನಾಪೋಕ್ಲು ಮತ್ತು ನಾಪೋಕ್ಲು ಕೊಡವ ಸಮಾಜ ಕ್ರೀಡಾ ಸಾಂಸ್ಕøತಿಕ ಮತ್ತು ಮನರಂಜನಾ ಕೂಟ, ನಾಪೋಕ್ಲು ಇಲ್ಲಿ ಕಳುಹಿಸಬೇಕು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ತಲಾ 9 ಜನ ತಂಡದಲ್ಲಿರಬೇಕು. ಮಾಹಿತಿಯನ್ನು ನಮೂದಿಸುವಾಗ ತರಬೇತಿ, ಪೈಪೋಟಿ, ಸಂವಾದ ಕಾರ್ಯಕ್ರಮಕ್ಕೆ ಭಾಗವಹಿಸುವ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಮೂದಿಸಿ ಕಳುಹಿಸಿಕೊಡಬೇಕು. 8ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿ, ವಿದ್ಯಾರ್ಥಿನಿ ಹಾಗೂ ಸಾರ್ವಜನಿಕರಿಗೆ ಮಾತ್ರ. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಸದಸ್ಯರುಗಳು ಹಾಗೂ ಈ ಕಾರ್ಯಕ್ರಮದ ಸಂಚಾಲಕರುಗಳಾದ ಮಾದೇಟಿರ ಬೆಳ್ಯಪ್ಪ - 9482815760, ಕುಡಿಯರ ಬೋಪಯ್ಯ-9945361722, ಅಕಾಡೆಮಿ ಕಚೇರಿ ದೂರವಾಣಿ-08272-229074 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಕೋರಿದ್ದಾರೆ.