ವೀರಾಜಪೇಟೆ, ಸೆ. 8: ವೀರಾಜಪೇಟೆ ಕೊಡವ ಸಮಾಜದಲ್ಲಿ ತಾ. 11 ರಂದು ಕೈಲ್ ಮೂಹೂರ್ತ ಹಬ್ಬವನ್ನು ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವದು ಎಂದು ಕೊಡವ ಸಮಾಜದ ಕ್ರೀಡಾ ಕಾರ್ಯದರ್ಶಿ ಕನ್ನಂಬಿರ ಚಿಣ್ಣಪ್ಪ ತಿಳಿಸಿದ್ದಾರೆ.ಅಂದು ಪೂರ್ವಹ್ನ 10 ಗಂಟೆಗೆ ನಡೆಯುವ ಆಟೋಟ ಸ್ಪರ್ಧೆಯಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಕಲ್ಲೆಸೆಯುವದು ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಪ್ರಥಮ ರೂ. 8 ಸಾವಿರ, ದ್ವಿತೀಯ ರೂ. 4 ಸಾವಿರ ಬಹುಮಾನ ನೀಡಲಾಗುವದು ಎಂದು ಚಿಣ್ಣಪ್ಪ ತಿಳಿಸಿದ್ದಾರೆ.