ಮಡಿಕೇರಿ, ಆ. 11: ಮಡಿಕೇರಿ ತಾಲೂಕು ತಹಶೀಲ್ದಾರರಾಗಿ ಸೇವೆಯಲ್ಲಿದ್ದ ಕುಂಞಮ್ಮ ಅವರನ್ನು ಸರಕಾರ ವರ್ಗಾವಣೆಗೊಳಿಸಿದೆ. ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಗ್ರೇಡ್ -1 ಹಾಗೂ ಗ್ರೇಡ್-2 ತಹಶೀಲ್ದಾರ ರುಗಳನ್ನು ವರ್ಗಾವಣೆಗೊಳಿಸಿದ್ದು, ಕುಂಞಮ್ಮ ಅವರನ್ನು ಕೂಡ ವರ್ಗಾವಣೆ ಮಾಡಿದ್ದಾರೆ. ಆದರೆ ಕುಂಞಮ್ಮ ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದು, ಅವರನ್ನು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿ ನಿಯೋಜನೆ ಮಾಡಲಾಗಿದೆ.