ಮಡಿಕೇರಿ, ನ. 7: ಯಾವದೇ ಬೆಳವಣಿಗೆಯಿಲ್ಲದೆ, ನಿಷ್ಕ್ರಿಯವಾಗಿರುವ ಯುವ ಕಾಂಗ್ರೆಸ್ ಅನ್ನು ತಳಮಟ್ಟ ದಿಂದಲೇ ಬಲಪಡಿಸಬೇಕೆಂದು ಕಾಂಗ್ರೆಸ್ ಮುಖಂಡರು ಯುವ ಕಾಂಗ್ರೆಸ್ಸಿಗರಿಗೆ ಕರೆ ನೀಡಿದ್ದಾರೆ.ಮಡಿಕೇರಿ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು, ಯುವ ಸಂಘಟನೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ರಾಹುಲ್ ಗಾಂಧಿ ಅವರು ಯುವ ಕಾಂಗ್ರೆಸ್ ಬೆಳವಣಿಗೆಗೆ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ ಜಿಲ್ಲೆಯಲ್ಲಿ ಯಾವದೂ ಫಲಪ್ರದ ವಾಗಿಲ್ಲ. ಹಿಂದಿನ ಯುವ ಕಾಂಗ್ರೆಸ್ ಅಧ್ಯಕ್ಷರು ಸಮರ್ಪಕ ರೀತಿಯಲ್ಲಿ ಕೆಲಸ - ಕಾರ್ಯಗಳನ್ನು ಮಾಡಿಲ್ಲ.

ಇದೀಗ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿರುವದು ಉತ್ತಮ ಬೆಳವಣಿಗೆ.