ಮಡಿಕೇರಿ ಸೆ. 7: ತÀಲಕಾವೇರಿಯಲ್ಲಿ ಪವಿತ್ರ ಕುಂಡಿಕೆ ಮೇಲ್ಭಾಗ ಟಾರ್ಪಲ್ಗಳನ್ನು ಅಳವಡಿಸಿರುವ ಅಪಚಾರದ ಕುರಿತು ಇಂದು “ಶಕ್ತಿ” ಯಲ್ಲಿ ಪ್ರಕಟಗೊಂಡ ವರದಿಗೆ ಕೆಲವರು ತೀಕ್ಷ್ಣ ಪ್ರ್ರತಿಕ್ರಿಯೆ ನೀಡಿದ್ದಾರೆ.ವೀರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಈ ಹಿಂದೆ ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಮಾತಂಡ ಮೊಣ್ಣಪ್ಪ ಅವರು ಇಂತಹ ಅಸಂಪ್ರದಾಯಿಕ ಕಾರ್ಯಗಳಿಗೆ ಸರಕಾರವೇ ನೇರ ಹೊಣೆ ಹೊರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇವಾಲಯ ವ್ಯವಸ್ಥಾಪನಾ ಸಮಿತಿ ರಚಿಸುವಾಗ ರಾಜಕೀಯ ಪ್ರೇರಿತವಾಗಿ ರಚಿಸಲಾಗುತ್ತದೆ. ಅಧ್ಯಾತ್ಮಿಕ ಜ್ಞಾನವಿಲ್ಲದವರು ಸಮಿತಿಗೆ ನೇಮಕಗೊಂಡು ಇರುವಂತಹ ಉತ್ತಮ ವ್ಯವಸ್ಥೆಯನ್ನೂ ಹಾಳುಗೆÀಡಹುತ್ತಿದ್ದಾರೆ. ಇದೀಗ ಜಾತ್ರೆ ಸನಿಹವಾಗುತಿದ್ದರೂ ಇನ್ನೂ ಹೊಸ ಸಮಿತಿಯನ್ನೇ ರಚಿಸಿಲ್ಲ ಎಂದು ಟೀಕಿಸಿದರು.
“ಎ” ಶ್ರೇಣಿಯ ಈ ಕ್ಷೇತ್ರವನ್ನು ಸರಕಾರ ಕಡೆಗಣಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಶತಮಾನಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ಯಾವದೇ ಮೇಲ್ಛಾವಣಿ ವ್ಯವಸ್ಥೆಯಿಲ್ಲದೆ ಪೂಜಾದಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ಮೇಲ್ಭಾಗದಲ್ಲಿ ಕತ್ತಲೆಯ ಛಾವಣಿ ಹೊದಿಸಿ ಕಾವೇರಿಯ ಪಾವಿತ್ರ್ಯಕ್ಕೆ ಧಕ್ಕೆಯುಂಟುಮಾಡಿರುವದು ವಿಷಾದಕರ ಎಂದು ಅವರು ತಿಳಿಸಿದ್ದಾರೆ.
ಯಾವದೇ ಛಾವಣಿ ಅನಗತ್ಯ
ಜಿಲ್ಲಾ ಖಾಸಗಿ ವಾಹನ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಮೂಲತ: ಭಾಗಮಂಡಲ ನಿವಾಸಿಯಾಗಿರುವ ಹೊಸೂರು ರಮೇಶ್ ಜೋಯಪ್ಪ್ಪ ಅವರು “ಶಕ್ತಿ” ಯೊಂದಿಗೆ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.
ತಲತಲಾಂತರಗಳಿಂದ ತಲ ಕಾವೇರಿಯಲ್ಲಿ ತೀವ್ರ ಮಳೆಯಾಗುತ್ತಿದ್ದ ಸಂದರ್ಭ ಗಳಲ್ಲಿಯೂ ಅರ್ಚಕ ಸಮೂಹ ಕೊಡೆ ಹಿಡಿದುಕೊಂಡು ಭಕ್ತಾದಿಗಳು ಕೂಡ ಕೊಡೆ ಹಿಡಿದುಕೊಂಡು ಪ್ರಕೃತಿದತ್ತ ಪರಿಸರದಲ್ಲಿ ಭಕ್ತಿಯಿಂದ ಪೂಜಾದಿಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಇತ್ತೀಚೆಗೆ ದಿಢೀರಾಗಿ ಕತ್ತಲೆ ಬರಿಸುವ ಮೇಲ್ಛಾವಣಿ ಮೂಲಕ ಕಾವೇರಿಯನ್ನು ದಿಗ್ಬಂಧನ ದಲ್ಲಿರಿಸಿದಂತೆ ಆರಾಧಿಸಲಾಗುತ್ತಿದೆ.
ಅಷ್ಟಮಂಗಲದಲ್ಲಿನ ಮಾರ್ಗ ದರ್ಶನದಂತೆ, ಧಾರ್ಮಿಕ ಶಾಸ್ತ್ರಾನುಸಾರವೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಈಗಿರುವ ಕತ್ತಲೆ ಬರಿಸುವ ಛಾವಣಿಯನ್ನು ತೆಗೆಸಬೇಕು. ಪಾರದರ್ಶಕ ಬಿಳಿ ಶೀಟುಗಳನ್ನು ಅಳವಡಿಸುವದು ಕೂಡ ಪವಿತ್ರ ಕ್ಷೇತ್ರದಲ್ಲಿ ಮೂಲ ಸ್ಥಾನಕ್ಕೆ ಧಕ್ಕೆಯುಂಟು ಮಾಡಬಹುದಾಗಿದ್ದು ಯಾವದೇ ಛಾವಣಿಯಿಲ್ಲದೆ ಈ ಹಿಂದಿನ ವರ್ಷಗಳಲ್ಲಿದ್ದಂತೆ ಮುಕ್ತ ವಾತಾವರಣದಲ್ಲಿ ಪೂಜಾದಿಗಳನ್ನು ನಡೆಸುವಂತಾಗಲಿ ಎಂದು ರಮೇೀಶ್ ಜೋಯಪ್ಪ ಆಶಿಸಿದ್ದಾರೆ.