ವೀರಾಜಪೇಟೆ, ಆ. 8: ವಿದ್ಯಾರತ್ನ ಎಜುಕೇಶನ್ ಟ್ರಸ್ಟ್, ವೀರಾಜಪೇಟೆ ಇವರ ಅಶ್ರಯದಲ್ಲಿ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ತರಬೇತಿ ಕಾರ್ಯಗಾರವು ಪೆರಂಬಾಡಿಯ ಶಂಶುಲ್, ಮಹಿಳಾ ಪದವಿ ಕಾಲೇಜಿನಲ್ಲಿ ನಡೆಯಿತು.ಕಾರ್ಯಗಾರದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಪಾಲ್ಗೊಂಡು ಮಾತನಾಡಿದ ಆಕಾಶ್ ದುಬೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಗುತ್ತಿದ್ದು, ಪ್ರತಿಯೊಂದು ಹಳ್ಳಿಗಳಲ್ಲೂ, ರಾಷ್ಟ್ರಿಕೃತ ಬ್ಯಾಂಕ್‍ಗಳ ಶಾಖೆಗಳನ್ನು ತೆರೆಯಲಾಗುತ್ತಿದ್ದು, ಸಾಮಾನ್ಯ ಜನರು ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಮತ್ತೊಂದೆಡೆ ಬ್ಯಾಂಕಿಗ್ ನೇಮಕಾತಿ ಸಂಸ್ಥೆಗಳು ಪ್ರತಿವರ್ಷ ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಪಾಲ್ಗೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕೆಂದರು.
ಇಂದಿನ ಉದ್ಯೋಗ ನೇಮಕಾತಿ ಪರೀಕ್ಷೆಗಳ ವಿಧಾನಗಳು ಬಹಳಷ್ಟು ಬದಲಾಗಿದ್ದು, ಊಹಿಸಲು ಸಾಧ್ಯ ವಾಗದಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ, ಸ್ವರ್ಧಾತ್ಮಕ ಯುಗದಲ್ಲಿ ಯಾವದೇ ಪರೀಕ್ಷೆಗಳನ್ನು ಎದುರಿಸಬೇಕಾದರೆ ಬಹಳಷ್ಟು ತಯಾರಿ ಉತ್ತಮ ಸಲಹೆಗಳೊಂದಿಗೆ ಮುನ್ನಡೆದರೆ ಮಾತ್ರ ಯಶ್ವಸಿ ಯಾಗಲು ಸಾಧ್ಯವಿದೆ ಎಂದು ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಕ್ರಂ ಹೇಳಿದರು.
ಕಾರ್ಯಕ್ರಮಕ್ಕೆ ಶಂಶುಲ್ ಉಲೇಮಾದ ಅಧ್ಯಕ್ಷ ಬಷೀರ್, ಪ್ರಾಂಶುಪಾಲ ಸತ್ಯನಾರಾಯಣ, ಆಡಳಿತಾಧಿಕಾರಿ ನಾರಾಯಣ, ಸಂಪನ್ಮೂಲ ಶಿಕ್ಷಕಿ ನೇಹ ಪಾಲ್ಗೊಂಡಿದ್ದರು. ಜೆಬ ಸ್ವಾಗತಿಸಿದರೆ, ಬಾನುಮತಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿಯ ಆಶ, ಅಂಜನ, ಜಬೀನ, ಸಮೀರ, ಕವಿತ, ಹಾಜರಿದ್ದರು.