ನಾಪೋಕ್ಲು, ನ. 28 : ಕೊಡಗಿನ ಪ್ರಕೃತಿ ಸೌಂದರ್ಯದಲ್ಲಿ ಉನ್ನತ ಸ್ಥಾನ ಪಡೆದಿರುವ ಪ್ರವಾಸಿಗರಿಗೆ ಹಾಗೂ ಚಾರಣಿಗರಿಗೆ ಅವಿಸ್ಮರಣೀಯ ಸ್ಥಳಗಳಲ್ಲಿ ಒಂದಾಗಿರುವ ತಡಿಯಂಡ ಮೋಳ್ ಬೆಟ್ಟಕ್ಕೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದೀಗ ಈ ಬೆಟ್ಟದ ಭಾಗ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿ ಅಪಾರ ವನಸಂಪತ್ತು ನಷ್ಟವಾಗಿದೆ.ಈ ಬೆಟ್ಟ ಮಾಕುಟ್ಟ ವಲಯಕ್ಕೆ ಒಳಪಟ್ಟಿದ್ದು ಪ್ರತಿವರ್ಷ ಬೆಂಕಿಗೆ ಆಹುತಿಯಾಗುತ್ತಿದ್ದು ಇದೀಗ ನವೆಂಬರ್ ತಿಂಗಳಿನಲ್ಲೇ ಬೆಂಕಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇದೀಗ ಯವಕಪಾಡಿ ಭಾಗದ ಬಕ್ಕದ ಕೊಲ್ಲಿ ಸೇರಿದಂತೆ ಬೆಟ್ಟದ ನೂರಾರು ಎಕರೆಗೂ ಹೆಚ್ಚಿನ ಭಾಗ ಬೆಂಕಿ ಆವರಿಸಿ ಅತ್ಯಮೂಲ್ಯ ಗಿಡಮರ ಪ್ರಾಣಿಪಕ್ಷಿಗಳು ಆಹುತಿ ಯಾಗಿರುವದ ಲ್ಲದೆ ಇದರಿಂದ ರಕ್ಷಿಸಿಕೊಳ್ಳಲು ಕಾಡಾನೆ ವನ್ಯ ಪ್ರಾಣಿಗಳು ನಾಡಿಗೆ ಧಾಳಿ ಮಾಡುವ ಸಾಧ್ಯತೆ ಇದೆ ಎಂದು ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.