ಮಡಿಕೇರಿ, ನ. 5 : ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ನ.10 ರಂದು ಮೈಸೂರಿನ ಮಾನಸ ಗಂಗೋತ್ರಿಯ ನಾಲ್ಮಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‍ರ ಸಂದೇಶಗಳ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಜನ ವಿದ್ಯಾರ್ಥಿ ಸಂಘದ ಕೊಡಗು ಜಿಲ್ಲಾ ಸಂಯೋಜಕ ಸಿ.ಜೆ.ಮೋಹನ್ ಮೌರ್ಯ ಸಂಘಟನೆಯ ಮೂಲಕ ರಾಜ್ಯದ ನಾಲ್ಕು ಡಿವಿಷನ್‍ಗಳಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿರುವ ದಾಗಿ ಹೇಳಿದರು. ಬಿವಿಎಸ್ ವತಿಯಿಂದ ಮಡಿಕೇರಿಯಲ್ಲಿ ನ.6 ರಂದು ನಡೆಯಬೇಕಿದ್ದ ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ’ ವಿಷಯದ ಕುರಿತಾದ ವಿಚಾರ ಸಂಕಿರಣವನ್ನು ಮುಂದೂಡಲಾಗಿದೆ ಎಂದರು.

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾವದೇ ಸಭೆ ಸಮಾರಂಭಗಳಿಗೆ ಅನುಮತಿಯನ್ನು ನೀಡದಿರುವದರಿಂದ ವಿಚಾರ ಸಂಕಿರಣವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೆ ವಿಚಾರ ಸಂಕಿರಣದ ದಿನಾಂಕವನ್ನು ಪ್ರಕಟಿಸುವದಾಗಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿವಿಎಸ್ ನಗರ ಕಾರ್ಯದರ್ಶಿ ದಿಲಿಪ್, ಸದಸ್ಯ ರತನ್ ಉಪಸ್ಥಿತರಿದ್ದರು.