ಗೋಣಿಕೊಪ್ಪಲು, ಸೆ. 25: ಡಾ. ಮುಕ್ಕಾಟೀರ ಎಂ. ಚೆಂಗಪ್ಪ ಜ್ಞಾಪಕಾರ್ಥ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸುಗಂಧ ಮತ್ತು ದರ್ಶನ್ ತಂಡ ಪ್ರಥಮ, ವಿದ್ಯಾನಿಕೇತನದ ರಾಹುಲ್ ಪೊನ್ನಪ್ಪ ಮತ್ತು ಮನೋಜ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಾವೇರಿ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ 30 ಕಾಲೇಜುಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಿಮ 5 ತಂಡಗಳ ಸುತ್ತಿನಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜುವಿನ 2 ತಂಡ, ವಿದ್ಯಾನಿಕೇತನ, ವೀರಾಜಪೇಟೆ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜುವಿನ ತಲಾ ಒಂದೊಂದು ತಂಡ ಪ್ರವೇಶ ಪಡೆದಿತ್ತು.

ಕವಿತಾ, ಪೊನ್ನಪ್ಪ, ಮುದ್ದಪ್ಪ, ಪೂಜಾ, ಶಾಕೀರ್, ಸುದೇಶ್ ಕುಮಾರ್ ಹಾಗೂ ಶ್ರೀಧರ್ ಕ್ವಿಜ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಡಾ. ಅನಿಲ್ ಕೆ ಮಲ್ಹೋತ್ರ, ಪ್ರಮಿಲಾ ಗೇಲ್ ಮಲ್ಹೋತ್ರ, ಕ್ರೀಡೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವ ಕೇಚಂಡ ಪ್ರಸನ್ನ, ಆರೋಗ್ಯ ಸಹಾಯಕಿ ಬಿ.ಆರ್. ಮಾಯಮ್ಮ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಡಾ. ಮುಕ್ಕಾಟೀರ ಸಿ. ಕಾರ್ಯಪ್ಪ, ಫಾತಿಮಾ ಕಾರ್ಯಪ್ಪ, ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಪ್ರಾಂಶುಪಾಲ ಪಟ್ಟಡ ಪೂವಣ್ಣ, ಕ್ವಿಜ್ ಸಂಚಾಲಕಿ ಡಾ. ಬೀನಾ, ಪಕ್ಷಿ ತಜ್ಞ ನರಸಿಂಹ ಉಪಸ್ಥಿತರಿದ್ದರು. ಮೇಘ ಮತ್ತು ಸ್ವಾಗತಿಸಿದರು.