ಮಡಿಕೇರಿ, ಅ. 27: ಬೆಳವಣಿಗೆಯತ್ತ ಸಾಗುತ್ತಿರುವ ಅಶ್ವಿನಿ ಆಸ್ಪತ್ರೆಯಲ್ಲಿ ಇಂದು ಡಯಾಲಿಸಿಸ್ ಕೇಂದ್ರ ಆರಂಭಗೊಂಡಿತು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಉದ್ಘಾಟನೆ ಮಾಡಿದರು.ಕಾವೇರಿ ಕೃಪ ವಿಶ್ವ ಕಲ್ಯಾಣ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುನಿಲ್ ಸುಬ್ರಮಣಿ ಅವರು, ಮುಂದಿನ ಸಾಲಿನಲ್ಲಿ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದರು. ಡಯಾಲಿಸಿಸ್‍ಗೆ ಪರ ಊರನ್ನು ಅವಲಂಭಿಸುವ ಪ್ರಮೇಯ ತಪ್ಪುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಜಿ. ರಾಜೇಂದ್ರ ಅವರು ಮಾತನಾಡಿ, ಆಸ್ಪತ್ರೆಯನ್ನು 5-6 ತಿಂಗಳಲ್ಲಿ ಸುಸಜ್ಜಿತವಾಗಿಸುತ್ತಿದ್ದು, ಐ.ಸಿ.ಯು. ಘಟಕ, ಹೃದಯ ಚಿಕಿತ್ಸೆ, ಕಿಡ್ನಿ, ಲೆಪ್ರೋಸ್ಕೊಪಿ, ಗೈನಕಾಲಜಿ ಇತ್ಯಾದಿ ಅಗತ್ಯ ನುರಿತ ವೈದ್ಯರುಗಳೂ ಲಭ್ಯವಾಗುವ ರೆಂದರು.