ಮಡಿಕೇರಿ, ಜ. 19: ಸುಂಟಿಕೊಪ್ಪದ ಸ್ಮಾಶ್ ಷಟಲ್ ಕ್ಲಬ್ ವತಿಯಿಂದ 6ನೇ ವರ್ಷದ ಮುಕ್ತ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜ.29 ರಿಂದ ಫೆ.1ರವರೆಗೆ ಚೆಟ್ಟಳ್ಳಿ ರಸ್ತೆಯಲ್ಲಿರುವ ಆಟದ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ನ ಪದಾಧಿಕಾರಿಗಳು ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಪಂದ್ಯವು 15 ಪಾಯಿಂಟ್ಗಳ ಮೂರು ಸೆಟ್ ವಿಧದಲ್ಲಿ ನಡೆಯಲಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವು 21 ಪಾಯಿಂಟ್ಗಳ ಮೂರು ಸೆಟ್ನಲ್ಲಿ ನಡೆಯಲಿದೆ ಎಂದರು.
ಒಬ್ಬ ಆಟಗಾರನಿಗೆ ಒಂದು ತಂಡದಲ್ಲಿ ಮಾತ್ರ ಆಡಲು ಅವಕಾಶವಿದೆ. ಪ್ರಥಮ ಬಹುಮಾನ 20 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ನಗದು ಹಾಗೂ ಟ್ರೊಫಿ. ಅಲ್ಲದೆ ಅತ್ಯುತ್ತಮ ತಂಡ ಹಾಗೂ ಅತ್ಯುತ್ತಮ ಆಟಗಾರರಿಗೂ ಬಹುಮಾನಗಳನ್ನು ನೀಡಲಾಗುವದೆಂದು ಪದಾಧಿಕಾರಿ ಗಳು ತಿಳಿಸಿದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳು ವವರು ತಾ. 27 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು. 7760542282, 9972966507, 9448090949.
ಸುದ್ದಿಗೊಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಇಬ್ರಾಹಿಂ, ಗೌರವಾಧ್ಯಕ್ಷ ಹೆಚ್.ಇ. ಶರೀಫ್, ಕಾರ್ಯದರ್ಶಿ ಅಜೀಜ್, ಪ್ರಮುಖರಾದ ಹಂಸ ಹಾಗೂ ಎಂ.ಎ. ಶರೀಫ್ ಉಪಸ್ಥಿತರಿದ್ದರು.