ಮಡಿಕೇರಿ ಜು.13 : ಸಚಿವ ಕೆ.ಜೆ ಜಾರ್ಜ್ ಅವರು ಅಲ್ಪಸಂಖ್ಯಾv Àರಾಗಿರುವ ಕಾರಣಕ್ಕಾಗಿ ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅರವತೊಕ್ಲು ಗ್ರಾ.ಪಂ ಮಾಜಿ ಸದಸ್ಯ ಪಿಲಿಪೋಸ್ ಮ್ಯಾಥ್ಯು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿವೈಎಸ್ಪಿ ಗಣಪತಿ ಅವರು ಸಾಯುವ ಮುನ್ನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದು, ಈ ಮೂವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು.
ಕುಶಾಲನಗರದ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಮಹೇಶ್ ಅವರು ಮೃತ ಡಿವೈಎಸ್ಪಿ ಪತ್ನಿ ಪಾವನರಿಂದ ದೂರು ದಾಖಲಿಸಿಕೊಳ್ಳದೆ ಇರುವ ಬಗ್ಗೆ ಪಿಲಿಪೋಸ್ ಮ್ಯಾಥ್ಯು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಕರ್ತ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ ಠಾಣಾಧಿಕಾರಿ ಮಹೇಶ್ ಅವರಿಗೆ ಕಾನೂನಿನ ಅರಿವಿಲ್ಲ ಎಂದು ಆರೋಪಿಸಿದರು. ಆದರೆ ಠಾಣಾಧಿಕಾರಿ ಮಹೇಶ್ ಅವರ ಕೋರಿಕೆಯಂತೆ ಕುಶಾಲನಗರ ಠಾಣೆಗೆ ಪಾವನ ಅವರು ದೂರು ನೀಡಲು ಹೋಗಿದ್ದರಾದರೂ ದೂರು ದಾಖಲಿಸಿಕೊಳ್ಳಲಿಲ್ಲ. ಇದು ಅತ್ಯಂತ ಖಂಡನೀಯವಾಗಿದೆ. ಮುಖ್ಯಮಂತ್ರಿಗಳು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರವೀಣ್, ಠಾಣಾಧಿಕಾರಿ ಮಹೇಶ್ ಅವರ ವಿರುದ್ಧವೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳನ್ನು ವಜಾ ಗೊಳಿಸಬೇಕೆಂದು ಆಗ್ರಹಿಸಿದರು.