ಸುಂಟಿಕೊಪ್ಪ, ಡಿ. 17: ನಾಕೂರು ಶಿರಂಗಾ¯ದ ಈಶ್ವರ ಮತ್ತು ದಂಡಿನ ಮಾರಿಯಮ್ಮ ದೇವಾಲಯದ ಟ್ರಸ್ಟ್ಟ್ಗೆ ಸಂಬಂಧಿಸಿದ ಜಾಗದ ಬಗ್ಗೆ ಗೊಂದ¯ದ ಹೇಳಿಕೆಗೆ ತೆರೆ ಎಳೆಯುವ ಕೆಲಸ ಆಗಬೇಕು ಎಂದು ಟ್ರಸ್ಟ್ನ ಕಾರ್ಯಾಧ್ಯಕ್ಷ ಎಲ್.ಎಂ. ರುದ್ರಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಕೂರು ಗ್ರಾಮದ ಸರ್ವೆ ನಂ.8 ರಲ್ಲಿ 1.22 ಎಕ್ರೆ ಜಾಗದಲ್ಲಿ ಶ್ರೀ ಈಶ್ವರ ದೇವಸ್ಥಾನವಿದೆ. ಸರ್ವೆ ನಂ. 66.2 ರಲ್ಲಿ 0.70 ಸೆಂಟ್ಸ್ನಲ್ಲಿ ದಂಡಿನ - ಮಾರಿಯಮ್ಮ ಬನ ಮತ್ತು ದೇವಸ್ಥಾನವಿದೆ. ಸರ್ವೆ ನಂ. 173/3 ರಲ್ಲಿ 0.15 ಸೆಂಟು ಗ್ರಾಮದೇವತೆ ಬನ ಮತ್ತು ಅಂಗನವಾಡಿ ಕೇಂದ್ರವಿದೆ. ನಾಕೂರು ಕಾಫಿ ಬೆಳೆಗಾರರ ತೋಟದ ಮಧ್ಯದಲ್ಲಿ ಬೆಳ್ಳಾರಿಕಮ್ಮ ಮಾಸ್ತಿಯಮ್ಮ ದೇವರುಗಳ ಬನವಿದೆ ಇವೆಲ್ಲದಕ್ಕೂ ಸಂಬಂಧಿಸಿದಂತೆ ಹಾರಂಗಿ ಜಲಾಶಯ ನಿರ್ಮಾಣ ವಾದ ಸಂದರ್ಭದಲ್ಲಿ ದೇವಸ್ಥಾನಕ್ಕೆ ವರಮಾನವಿದ್ದ ಗದ್ದೆ ಮುಳುಗಡೆ ಯಾಗಿದ್ದು, ನಾಕೂರು ಗ್ರಾಮದ ಸರ್ವೆ 42/ಪಿ.1 ರಲ್ಲಿ 1.20 ಕೃಷಿ ಜಮೀನನ್ನು ಕಳೆದ 50 ವರ್ಷ ಗಳಿಂದ ಶ್ರೀ ಈಶ್ವರ ದೇವಸ್ಥಾನ ಸಮಿತಿಯವರು ಕಾಡು ಮರಗಳನ್ನು ಸಂರಕ್ಷಿಸಿಕೊಂಡು ಬಂದಿದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಿಲ್ವರ್ ಗಿಡಗಳನ್ನು ನೆಟ್ಟು ಬೆಳೆಸಿದ್ದು ಬೇಲಿ ಹಾಕಲಾಗಿದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದ್ರೆ ಹೇರೂರು ಗ್ರಾಮದ ಸರ್ವೆನಂ1.1 ರಲ್ಲಿ ಕೊಡಗಿನ ಜಿಲ್ಲಾಧಿಕಾರಿಯವರ ಆದೇಶದಂತೆ 2011-2012 ರಲ್ಲಿ ಪರಿಶಿಷ್ಟ ಜನಾಂಗದವರಿಗೆ ಸ್ಮಶಾನಕ್ಕಾಗಿ 1 ಎಕ್ರೆ ಜಾಗ ಮಂಜೂರಾತಿ ಆಗಿದ್ದರೆ, ಹೇರೂರು ಗ್ರಾಮದ ಸರ್ವೆ ನಂ. 1.1 ರಲ್ಲೂ 2.40 ಎಕ್ರೆ ಜಾಗವನ್ನು 2012 ರಲ್ಲಿ ನವಗ್ರಾಮ ನಿರ್ಮಾಣಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿನಲ್ಲಿ ಕಾಯ್ದಿರಿಸಲಾಗಿದೆ.
ಆದರೆ ಗ್ರಾಮದ ಕೆಲವರು ಬಡವರಿಗೆ ಸೂರು ನಿರ್ಮಿಸಲು ಹಾಗೂ ಸ್ಮಶಾನಕ್ಕೆ ಜಾಗವನ್ನು ಮಂಜೂರು ಮಾಡಿಸಲು ಪ್ರಯತ್ನಿಸುವದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.