ಗೋಣಿಕೊಪ್ಪಲು, ಸೆ. 15: ಇಲ್ಲಿನ ಕಾವೇರಿ ಕಾಲೇಜು ಬಿಸಿಎ ವಿಭಾಗದಿಂದ ನಡೆದ ಮೈಸೂರು, ಕೊಡಗು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನಡೆದ ಕಾವೇರಿ ಅಚಿಂತ್ಯಾ ಟೆಕ್ನಿಕಲ್ ಫೆಸ್ಟ್ ಕಾರ್ಯಕ್ರಮವನ್ನು ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ಪ್ರಾಂಶುಪಾಲ ಪಟ್ಟಡ ಪೂವಣ್ಣ, ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಹಾಗೂ ಆಂತರಿಕ ಗುಣಮಟ್ಟ ಸುಧಾರಣಾ ಸಮಿತಿ ಮುಖ್ಯಸ್ಥ ಕಾವೇರಪ್ಪ ಉಪಸ್ಥಿತರಿದ್ದರು.
ಈ ಸಂದರ್ಭ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆ ಮ್ಯಾಡ್ ಆಕ್ಟ್, ತಿಸಿಸ್ ಕಸ್ಟ್, ಕ್ವಿಝ್-ವಿಝ್, ಗೇಮಿಂಗ್ ಅರೆನಾ, ಕ್ಯಾಂಪಸ್ ಹಂಟ್, ಬಿಸಿಎ ವಿದ್ಯಾರ್ಥಿಗಳಿಗೆ ಅಲ್ಟಿಮೇಟ್ ಕೋಡೆರ್, ವೆಬ್ ಡಿಸೈನ್, ಕ್ಯಾಂಪ್ಸ್ ಹಂಟ್, ಕ್ವಿಝ್-ವಿಝ್ ಹಾಗೂ ಗೇಮಿಂಗ್ ಅರೆನಾ ಸ್ಪರ್ಧೆಗಳು ನಡೆದವು. ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭ ಬಿಸಿಎ ಪ್ರಾಧ್ಯಪಕರುಗಳಾದ ಆರ್.ಆರ್. ನೌಮ್ಯ, ಕೆ.ಎಸ್. ಕೌಶಿಕ್ ಹಾಗೂ ಎ.ಕೆ. ಕೃತಿ ಉಪಸ್ಥಿತರಿದ್ದರು.