ಗೋಣಿಕೊಪ್ಪಲು, ನ. 7: ಕೂರ್ಗ್ ಎಕ್ಸ್ಪ್ರೆಸ್ ಡಾಟ್ ಕಾಮ್ ವತಿಯಿಂದ ಪರಿಸರ ರಕ್ಷಣೆ ಕಾಳಜಿ ಹೊತ್ತ ಟ್ರೋಪಿಕಲ್ ರಷ್ ಮ್ಯಾರಥಾನ್ನಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳುವ ಮೂಲಕ ಪರಿಸರ ಕಾಳಜಿ ಮೆರೆದರು. ಟಿ. ಶೆಟ್ಟಿಗೇರಿಯ ಕೆಕೆಆರ್ ವೃತ್ತದಿಂದ ಕಡಮಕೊಲ್ಲಿ ರೆಸಾರ್ಟ್ವರೆಗೆ ವಿವಿಧ ಹಂತದ ಮ್ಯಾರಥಾನ್ ಸ್ಪರ್ಧೆ ನಡೆಯಿತು.
ವಿಜೇತರು: 5 ಕಿ.ಮೀ ಮ್ಯಾರಥಾನ್ ಬಾಲಕರ ವಿಭಾಗದಲ್ಲಿ ಅರ್ಜುನ್ (ಪ್ರ), ಸಂಪತ್ (ದ್ವಿ), ಸೋಮಣ್ಣ (ತೃ), ಬಾಲಕಿಯರಲ್ಲಿ ರಂಜಿತಾ (ಪ್ರ), ವೈಷ್ಣವಿ (ದ್ವಿ), ಸಿಮೋನ್ (ತೃ), 10 ಕಿ.ಮೀ ಬಾಲಕರಲ್ಲಿ ಅಯ್ಯಪ್ಪ (ಪ್ರ), ಸಂಜೀವ್ ಕುಮಾರ್ (ದ್ವಿ), ಲಿಂಗರಾಜ್ (ತೃ), ಬಾಲಕಿಯರಲ್ಲಿ ಕಾವೇರಿ ಜೀವನ್ (ಪ್ರ), ಅರ್ಪಿತಾ (ದ್ವಿ), 21 ಕಿ.ಮೀ ಪುರುಷರ ಓಟದಲ್ಲಿ ಶ್ರೀಧರ್ (ಪ್ರ), ಕೆ. ದೀಪನ್ (ದ್ವಿ), ಸುಖೇಶ್ (ತೃ), ಮಹಿಳೆಯರಲ್ಲಿ ವಿನೋಲಿಯ ಪ್ರಥಮ, 21 ಕಿ.ಮೀ ಸೈಕ್ಲಿಂಗ್ನಲ್ಲಿ ರೋಶನ್ (ಪ್ರ), ಸಚಿನ್ (ದ್ವಿ), ಕಾರ್ಯಪ್ಪ (ತೃ) ಸ್ಥಾನ ಪಡೆದುಕೊಂಡರು.
5 ಕಿ.ಮೀ ಸ್ಪರ್ಧೆಯಲ್ಲಿ 47, 10 ಕಿ.ಮೀ 35, 21 ಕಿ.ಮೀ ಪುರುಷರ ವಿಭಾಗದಲ್ಲಿ 9, ಮಹಿಳೆಯರಲ್ಲಿ ವಿನೋಲಿಯ ವಿದೇಶಿ ಮಹಿಳೆ ಏಕಾಂಗಿಯಾಗಿ ಪಾಲ್ಗೊಂಡರು. ಸೈಕ್ಲಿಂಗ್ನಲ್ಲಿ 21 ಸ್ಪರ್ಧೆಗಳು ಪಾಲ್ಗೊಂಡಿದ್ದರು. 2 ಕಿ ಮೀ ಓಡಿದ ಪ್ರತಿಭಾ ಶಾಲೆಯ ಕ್ರೀಡಾಪಟುಗಳಿಗೆ ವಿಶೇಷ ಬಹುಮಾನ ನೀಡಲಾಯಿತು.
ಕ್ರೀಡಾಕೂಟವನ್ನು ಅಂತರ್ರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ, ಸೈಕ್ಲಿಂಗ್ ಸ್ಪರ್ಧೆಯನ್ನು ಪರಿಸರ ಪ್ರೇಮಿ ಬೋಸ್ ಮಾದಪ್ಪ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಂಎಲ್ಸಿ ವೀಣಾ ಅಚ್ಚಯ್ಯ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ದಾನಿಗಳಾದ ಸುಜು ಪೊನ್ನಪ್ಪ, ಕಟ್ಟೇರ ರಘು, ಪ್ರೇಮ, ಕೂರ್ಗ್ ಎಕ್ಸ್ಪ್ರೆಸ್ ಡಾಟ್ ಕಾಮ್ ಸಂಚಾಲಕ ರಿಕ್ಕಿ ಮೊಣ್ಣಪ್ಪ ಹಾಗೂ ಸದಸ್ಯ ಪೊನ್ನಣ್ಣ ಉಪಸ್ಥಿತರಿದ್ದರು. ಕಡಮಕೊಲ್ಲಿ ರೆಸಾರ್ಟ್ನಲ್ಲಿ ನಡೆದ ಸಮಾರೋಪದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.