ಮಡಿಕೇರಿ, ಅ. 22: ಟಿಪ್ಪುವನ್ನು ದೇಶಭಕ್ತ ಎಂದು ಬಿಂಬಿಸಿ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುವ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದು ಕೊಡವ ಮಕ್ಕಡ ಕೂಟ ತಿಳಿಸಿದೆ.

1780ರ ಆಸುಪಾಸಿನ ಕಾಲಘಟ್ಟದಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯ ವಿಸ್ತರಣೆಯ ನೆಪ ಒಡ್ಡಿ ದಂಡೆತ್ತಿ ಹೋದ ಕಡೆಯಲ್ಲೆಲ್ಲಾ ಟಿಪ್ಪು ಹಿಂದೂಗಳನ್ನೇ ಕೇಂದ್ರವಾಗಿರಿಸಿಕೊಂಡು, ಹಿಂದೂಗಳ ಮೇಲೆ ದೌರ್ಜನ್ಯವೆಸಗಿರುವ ದಾಖಲೆಗಳು ಬಹಳಷ್ಟಿವೆ.ಕರ್ನಾಟಕದ ಮೇಲೆ ದಂಡೆತ್ತಿ ಬಂದಾಗ ಮತ್ತೆ ಹಿಂದೂಗಳೇ ಟಿಪ್ಪುವಿನ ಕೆಂಗಣ್ಣಿಗೆ ಗುರಿಯಾಗಿ, ಹಿಂದುಗಳ ಭಾವನಾತ್ಮಕ, ಶ್ರದ್ಧಾ ಕೇಂದ್ರವಾದ ದೇವಾಲಯಗಳನ್ನು ಧ್ವಂಸ ಮಾಡಿರುವದಕ್ಕೆ ಇಂದಿಗೂ ಅಲ್ಲಲ್ಲಿ ಅಳಿದುಳಿದಿರುವ ಭಗ್ನಾವಾಶೇಷವಾದ ದೇವಾಲಯಗಳು, ಭಿನ್ನಗೊಂಡಿರುವ ದೇವತಾ ಮೂರ್ತಿಗಳು ಮೂಕ ಸಾಕ್ಷಿಯಾಗಿ ನಮ್ಮ ಕಣ್ಣೆದುರಿಗಿದೆ. ಹೀಗಿದ್ದಾಗ್ಯೂ ಜಯಂತಿ ಹೆಸರಿನಲ್ಲಿ ಕೊಡಗಿನ ಶಾಂತಿ ಕದಡುವದು ಸರಿಯಲ್ಲ. ಟಿಪ್ಪು ತಾನು ಆಕ್ರಮಣ ಮಾಡಿದ ಕಡೆಯಲೆಲ್ಲಾ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಪಂಥಕ್ಕೆ ಮತಾಂತರಿಸಿ, ತನ್ನ ಸೇನೆಯಲ್ಲಿ ದುಡಿಯುವಂತೆ ಮಾಡಿದ ನಿದರ್ಶನಗಳು ಇತಿಹಾಸದಲ್ಲಿದೆ.

ಟಿಪ್ಪು ಜಯಂತಿಯ ಆಚರಣೆ ನಿಷೇಧಿಸುವ ಬಗ್ಗೆ ಕೊಡವ ಮಕ್ಕಡ ಕೂಟ ಪ್ರಧಾನಿಯವರಿಗೆ, ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದೆ ಎಂದÀು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಉಪಾಧ್ಯಕ್ಷ ಬಾಳೆಯಡ ಪ್ರತೀಶ್ ಪೂವಯ್ಯ, ಕಾರ್ಯದರ್ಶಿ ಪುತ್ತರಿರ ಕಾಳಯ್ಯ, ಖಜಾಂಚಿ ಅಮ್ಮಾಟಂಡ ಮೇದಪ್ಪ, ಜಂಟಿ ಕಾರ್ಯದರ್ಶಿ ಕೇಲೇಟಿರ ದೇವಯ್ಯ, ನಿರ್ದೇಶಕರಾದ ಅಮ್ಮಾಟಂಡ ಬೋಪಣ್ಣ, ಪೊನ್ನೋಲತಂಡ ವಿನೋದ್, ಮಡ್ಲಂಡ ಮೋನಿಶ್, ಪುತ್ತರಿರ ಶಿವುನಂಜಪ್ಪ, ಚೊಟ್ಟೆಯಂಡ ಕಾರ್ಸನ್ ಪುತ್ತಪ್ಪ, ಕಳ್ಳೆಂಗಡ ಬಬ್ಬಿನ್ ಬೋಪಣ್ಣ ಹಾಗೂ ಸದಸ್ಯರು ತಿಳಿಸಿದ್ದಾರೆ.