ಶ್ರೀಮಂಗಲ, ನ. 7: ಟಿಪ್ಪು ಜಯಂತಿ ಆಚರಿಸಲು ಸರಕಾರ ನಿರ್ಧರಿಸಿರುವ ಕ್ರಮವನ್ನು ವಿರೋಧಿಸಿ ಟಿ.ಶೆಟ್ಟಿಗೇರಿಯಲ್ಲಿ ಬಿ.ಜೆ.ಪಿ, ಹಿಂದೂ ಸಂಘಟನೆಗಳು ಹಾಗೂ ಕೊಡವ ಸಮಾಜ ಸಂಘಟನೆಗಳು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದವು.

ಈ ಸಂದÀರ್ಭ ಮಾತನಾಡಿದ ವೀರಾಜಪೇಟೆ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಸೌಹಾದರ್Àಯುತವಾಗಿ ಬದುಕುತ್ತಿರುವ ಜನಾಂಗಗಳ ನಡುವೆ ಸರಕಾರವೇ ವಿಷ ಬೀಜ ಬಿತ್ತುತ್ತಿದೆ. ಕೊಡಗಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕೊಡವರನ್ನು ಹತ್ಯೆ ಮಾಡಿ ಮತಾಂತರ ಮಾಡಿದ ಹಾಗೂ ನೂರಾರು ದೇವಾಲಯಗಳನ್ನು ದ್ವಂಸ ಮಾಡಿದ ಟಿಪ್ಪು ಜಯಂತಿಯನ್ನು ಯಾವ ಕಾರಣದಿಂದಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಮಾತನಾಡಿ, ಟಿಪ್ಪು ಜಯಂತಿ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಸರಕಾರವೇ ಮುಂದಾಗಿದೆ. ಟಿಪ್ಪು ಜಯಂತಿಗೆ ಸಾರ್ವಜನಿಕವಾಗಿ ವಿರೋಧವಿದ್ದರೂ ರಾಜ್ಯ ಸರಕಾರ ತನ್ನ ಹಠಮಾರಿ ಧೋರಣೆ ಮೂಲಕ ಜಯಂತಿ ಆಚರಿಸಲು ಮುಂದಾಗಿರುವದು ದುರಂತವಾಗಿದೆ ಎಂದರು.

ಈ ಸಂದÀರ್ಭ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಉಪಾಧ್ಯಕ್ಷ ಮಚ್ಚಮಾಡ ಶ್ಯಾಮ್, ಕಾರ್ಯದರ್ಶಿ ಮಾಣೀರ ಉಮೇಶ್, ಗ್ರಾ.ಪಂ. ಸದಸ್ಯರಾದ ಚೆಟ್ಟಂಗಡ ರಂಜಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಡಿಯಂಗಡ ಕರುಂಬಯ್ಯ, ಚೊಟ್ಟೆಯಂಡಮಾಡ ಪ್ರಜಾ, ಚೆಟ್ಟಂಗಡ ಸುರೇಂದ್ರ, ಉಳುವಂಗಡ ದತ್ತ, ಮಾಣೀರ ಬೋಪಣ್ಣ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಮತ್ತಿತರರು ಹಾಜರಿದ್ದರು.