ಮಡಿಕೇರಿ, ನ.4: ರಾಜ್ಯದಲ್ಲಿ ಇತ್ತೀಚೆಗೆ ದೇಶಭಕ್ತ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ರುದ್ರೇಶ್ ಅವರ ಹತ್ಯೆ ಬೆಂಗಳೂರಿನಲ್ಲಿ ನಡೆದ ಫಣೀಂದ್ರ ಎನ್ನುವ ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ಕುಶಾಲನಗರದಲ್ಲಿ ನಡೆದ ಪ್ರವೀಣ್ ಪೂಜಾರಿ ಅವರ ಹತ್ಯೆ, ಮೂಡಬಿದಿರೆಯಲ್ಲಿ ನಡೆದ ಅಶೋಕ್ ಪೂಜಾರಿ ಅವರ ಹತ್ಯೆ ಯತ್ನ, ಹೂ ಮಾರಾಟ ಮಾಡುವ ಪ್ರಶಾಂತ ಪೂಜಾರಿ ಹತ್ಯೆ, ದಕ್ಷಿಣ ಕನ್ನಡದ ಪೆರ್ಮದೆಯಲ್ಲಿ ಶ್ರೀ ಕಿಶೋರ್ ಕುಮಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ, ನವೆಂಬರ್‍ನಲ್ಲಿ ಮಡಿಕೇರಿಯಲ್ಲಿ ಕುಟ್ಟಪ್ಪ ಅವರನ್ನು ಹತ್ಯೆ, ಮೈಸೂರಿನಲ್ಲಿ ರಾಜು, ಉಳ್ಳಾಲದಲ್ಲಿ ರಾಜು ಕೋmõÁ್ಯನ್, ವಾಮಂಜೂರಿನಲ್ಲಿ ಚರಣ್ ಪೂಜಾರಿ ಅವರ ಹತ್ಯೆ, ಇದಲ್ಲದೇ ಬೆಳಗಾವಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯನ್ನು ಯಾವದೇ ಸುಳಿವು ಸಿಗದಂತೆ ಹತ್ಯೆ ಮಾಡಿರುವದು, ರಾಜ್ಯದಲ್ಲಿ ಇಂತಹ ಅನೇಕ ಗಂಭೀರ ಪ್ರಕರಣಗಳು ನಡೆದಿದ್ದರೂ ರಾಜ್ಯ ಸರ್ಕಾರ ಯಾವದೇ ಕ್ರಮ ಕೈಗೊಳ್ಳದೇ ಇರುವದು ಇಂತಹ ಹೇಯ ಕೃತ್ಯಗಳಲ್ಲಿ ತೊಡಗುವವರಿಗೆ ಕುಮ್ಮಕ್ಕು ಸಿಕ್ಕಿದಂತಾಗಿದೆ.