ವೀರಾಜಪೇಟೆ, ಅ. 2: ದೇಶವೇ ಸ್ವಚ್ಚ ಭಾರತವೆಂದು ಪ್ರತಿಯೊಬ್ಬ ಭಾರತೀಯನು ಹೇಳ ಬೇಕಾದರೆ, ಕೈಯ್ಯಲ್ಲಿ ಪೊರಕೆ ಹಿಡಿದು ವರ್ಷ ಪೂರ್ತಿಯಾಗಿ ವಿಶ್ರಾಂತಿ ಇಲ್ಲದೆ ಹಬ್ಬ ಹರಿದಿನಗಳು ಬಂದರೂ ಅಳುಕಿಲ್ಲದೆ, ಬೇಸರವಿಲ್ಲದೆ, ನೋವಿಲ್ಲದೆ ಪಟ್ಟಣವನ್ನು ಶುಚಿಗೊಳಿಸುವ ಪೌರ ಕಾರ್ಮಿಕರ ಸ್ವಚ್ಚತೆಯ ಸೇವೆ ಅಮೂಲ್ಯವಾದದ್ದು ಎಂದು ಜಾತ್ಯತೀತ ಜನತಾ ದಳ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಗಾಂಧಿ ಜಯಂತಿಯ ಅಂಗವಾಗಿ ಇಂದು ಸುಣ್ಣದ ಬೀದಿಯ ಪೌರ ಕಾರ್ಮಿಕರ ಕಾಲೋ&divound;ಯ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ 61 ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಯಾವದೇ ಹಬ್ಬ, ಉತ್ಸವ ಹರಿದಿನಗಳಾದರೂ ಪಟ್ಟಣ ಕಸದ ಕೊಂಪೆಯಾಗಿರುತ್ತದೆ. ಮಾರನೇ ದಿನ ಬೆಳಗಿನ ನಸುಕಿನಲ್ಲಿಯೇ ಪಟ್ಟಣ ಶುಚಿಯಾಗಿರುತ್ತದೆ. ಇದು ಪೌರ ಕಾರ್ಮಿಕರ ಕರ್ತವ್ಯ &divound;ಷ್ಠೆಯ ಶುಚಿತ್ವದ ಸೇವೆಯಾಗಿದೆ. ಮಹಾತ್ಮ ಗಾಂಧಿüೀಜಿಯವರ ಸ್ವಚ್ಚತೆಯ ಕನಸು ನೆನಸಾಗಬೇಕಾದರೆ ಪೌರ ಕಾರ್ಮಿಕರ ಸೇವೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಪಕ್ಷದ ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ ಪಟ್ಟಣದ ಸ್ವಚ್ಚತೆಯ ಸೇವೆಯಲ್ಲಿ ಪ್ರತಿಯೊಬ್ಬರು ನೆನಪಿಸುವದು ಪೌರ ಕಾರ್ಮಿಕರನ್ನು. ಸರಕಾರ ಪೌರ ಕಾರ್ಮಿಕರ ಶುಚಿತ್ವದ ಸೇವೆಯನ್ನು ಪರಿಗಣಿಸಿ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು. ಪಕ್ಷ ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿನೂತನವಾಗಿ ಗಾಂಧಿ ಜಯಂತಿಯನ್ನು ಆಚರಿಸಿದೆ ಎಂದರು.

ವೀರಾಜಪೇಟೆ ವಿಭಾಗದ ಪಕ್ಷದ ಮುಖಂಡ ಸಿ.ಎ. ನಾಸರ್ ಮಾತನಾಡಿ ಪಟ್ಟಣದ ಸ್ವಚ್ಚತೆಯನ್ನು ಕಾಪಾಡುವ ಪೌರ ಕಾರ್ಮಿಕರನ್ನು ಗಾಂಧಿ ಜಯಂತಿಯ ದಿನ ಸನ್ಮಾ&divound;ಸಿ ಗೌರವಿಸುವದು ಕಾರ್ಮಿಕರ ಸ್ವಚ್ಚತೆಯ ಸೇವೆಗೆ ಸಂದ ಗೌರವ ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಹಾಗೂ ಪಕ್ಷದ ಜಿಲ್ಲಾ ಮುಖಂಡ ಎಸ್.ಎಚ್.ಮತೀನ್, ಕಾರ್ಯಕರ್ತರುಗಳಾದ ಅಜರ್ ಹುಸೇನ್, ಶಕೀಲ್ ನಗರ ಸಮಿತಿಯ ಎಲ್ಲ ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಪಟ್ಟಣ ಪಂಚಾಯಿತಿಯ 61ಮಂದಿ ಪೌರ ಕಾರ್ಮಿಕರನ್ನು ಶಾಲು ಹೊದಿಸಿ ನೆನೆಪಿನ ಕಾಣಿಕೆ &divound;ೀಡಿ ಸನ್ನಾನಿಸಿ ಗೌರವಿಸಲಾಯಿತು.