ನಾಪೆÇೀಕ್ಲು, ಜ. 31: ಕೊಡಗು ಜಿಲ್ಲೆ ಕ್ರೀಡೆಯ ತವರೂರು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ, ಪ್ರತಿಭೆಗೆ ಅವಕಾಶ ಸಿಗುತ್ತಿಲ್ಲ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮೀಣ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹ ನೀಡಲಾಗುವದೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಸಮೀಪದ ಹಳೇ ತಾಲೂಕಿನ ಅಲ್-ಅಮೀನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಕ್ರೀಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಯಾವದೇ ಸವಲತ್ತನ್ನು ನೀಡದಿರುವದು ವಿಷಾದÀಕರ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಕ್ರೀಡೆಗೆ ಹೆಚ್ಚಿನ ಮಹತ್ವ ಮತ್ತು ಅನುದಾನ ನೀಡಲು ಪ್ರಯತ್ನಿಸಲಾಗುವದು ಎಂದರು.

ಅಂತಿಮ ಪಂದ್ಯಾಟದಲ್ಲಿ ಎಡಪಾಲ ತಂಡವು ಗುಂಡಿಗೆರೆ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಉತ್ತಮ ಆಲ್‍ರೌಂಡರ್ ಆಗಿ ಸೀಯಾಬ್ ಗುಂಡಿಗೆರೆ, ಉತ್ತಮ ಹೊಡೆತಗಾರ ಯಯ್ಯು ಎಡಪಾಲ ಪ್ರಶಸ್ತಿಯನ್ನು ಪಡೆದುಕೊಂಡರು.

ಸಮಾರಂಭದಲ್ಲಿ ಅಲ್ ಅಮೀನ್ ಯೂತ್ ಕ್ಲಬ್ ಅಧ್ಯಕ್ಷ ಎ.ಹೆಚ್. ಅಜೀಜ್, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಮನ್ಸೂರ್ ಅಲಿ, ಮಣವಟ್ಟಿರ ಪೆÇನ್ನು ಪೆÇನ್ನಪ್ಪ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಎಂ.ಎಸ್. ಇಬ್ರಾಹಿಂ, ಬೆಂಗಳೂರಿನ ಉದ್ಯಮಿ ಅರೆಯಡ ಪವಿನ್ ಪೆÇನ್ನಣ್ಣ, ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಬಿ.ಎಸ್. ವೆಂಕಟೇಶ್, ಅರೆಯಡ ಡಿ. ಸೋಮಪ್ಪ, ಶಂಷುದ್ದೀನ್, ನಾವಾಜ್, ನೌಷದ್, ಉಸ್ಮಾನ್, ಟಿ.ಎ. ಉಂಬಾಯಿ, ಪಿ.ಎಂ. ನಾಸಿರ್ ಮತ್ತಿತರರು ಇದ್ದರು.