ವೀರಾಜಪೇಟೆ, ಆ.11: ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 9 ಜಾನುವಾರುಗಳು ಹಾಗೂ ನಂ ಕೆ ಎಲ್ 10 ಎ ಎ9605ರ ಪಿಕಪ್ ಜೀಪ್ (ಕೆ.ಎಲ್. 10 ಎ.ಎ.9605)ನ್ನು ಕುಟ್ಟ ಸಮೀಪದ ಬಾಡಗ ಗ್ರಾಮದ ಬೊಳ್ಳೆರ ಗೇಟ್ ಬಳಿ ಕುಟ್ಟ ವಲಯದ ಸರ್ಕಲ್ ಇನ್ಸಪೆಕ್ಟರ್ ಸಿ.ಎನ್. ದಿವಾಕರ್ ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ತಂಡ ಜೀಪಿನ ತಪಾಸಣೆಯಲ್ಲಿರುವಾಗ ಆರೋಪಿಗಳು ಬೆಳಗಿನ ಜಾವದ ಮುಸುಕಿನಲ್ಲಿ ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ವಶಪಡಿಸಿಕೊಂಡ 60,000 ಮೌಲ್ಯದ ಜಾನುವಾರುಗಳನ್ನು ಮೈಸೂರಿನ ಗೋ ಶಾಲೆಗೆ ಸಾಗಿಸಲಾಗಿದೆ.
ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್.ಪಿ ನಾಗಪ್ಪ ಅವರ ನಿರ್ದೇಶನದಲ್ಲಿ ಪೊಲೀಸರ ತಂಡ ಜಾನುವಾರುಗಳ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ. ಜೀಪು ಹಾಗೂ ಜಾನುವಾರುಗಳ ಮೌಲ್ಯ ರೂ 2.10,000 ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.