ಸಿದ್ದಾಪುರ, ಸೆ. 17: ಜೀತದಿಂದ ಮುಕ್ತರಾಗಿರುವ ಸಮೀಪದ ಕಣ್ಣಂಗಾಲ ಗ್ರಾ.ಪಂ. ಅಧ್ಯಕ್ಷೆ ಈಶ್ವರಿಗೆ ರೂ. 20 ಸಾವಿರ ಹಣವನ್ನು ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ವಿತರಿಸಿದರು. ಕಣ್ಣಂಗಾಲ ಗ್ರಾ.ಪಂ. ಅಧ್ಯಕ್ಷೆಯಾಗಿರುವ ಈಶ್ವರಿ ಅದೇ ಗ್ರಾ.ಪಂ.ನ ಸದಸ್ಯ ಗೋಪಾಲಕೃಷ್ಣ ಎಂಬವರ ತೋಟದಲ್ಲಿ ಜೀತದಾಳಾಗಿ ದುಡಿಯುತ್ತಿದ್ದರು. ಈಶ್ವರಿಯವರ ಮಕ್ಕಳನ್ನೂ ಶಾಲೆಗೆ ಕಳುಹಿಸದೆ ದುಡಿಸುತ್ತಿದ್ದರು. ಜೀತದಿಂದ ಮುಕ್ತಳಾಗಿರುವ ಈಶ್ವರಿಗೆ ಸ್ವಂತ ಮನೆ ಇಲ್ಲದಿದ್ದು, ಜೀವನದ ಖರ್ಚಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ರೂ. 20 ಸಾವಿರ ಹಣವನ್ನು ನೀಡಿದೆ. ಈ ಸಂದರ್ಭ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಗ್ರಾ.ಪಂ. ಉಪಾಧ್ಯಕ್ಷ ಮನೋಜ್ ಇದ್ದರು.