ಗೋಣಿಕೊಪ್ಪಲು, ಜ. 23: ಜಿಲ್ಲೆಯಲ್ಲಿ 20-25 ನಕ್ಸಲರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸೆಂಟ್ರಲ್ ಬ್ಯೂರೋದಿಂದ ಮಾಹಿತಿ ಇದ್ದು ಇಂತಹವರ ಬಗ್ಗೆ ಜಿಲ್ಲೆಯ ಮೂಲ ನಿವಾಸಿಗಳು ಬಹು ಎಚ್ಚರಿಕೆಯಿಂದ ಇರಬೇಕಾಗಿದೆ. ಜಿಲ್ಲಾಡಳಿತಕ್ಕೂ ಮಾಹಿತಿಯನ್ನು ನೀಡಲಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಅಗತ್ಯವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.ಇತ್ತೀಚೆಗೆ ನಡೆದ ಆರ್.ಎಂ.ಸಿ. ಚುನಾವಣೆಯಲ್ಲಿ ಅಜ್ಜಿಕುಟ್ಟಿರ ಪ್ರವೀಣ್ ಮುತ್ತಪ್ಪ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಹುದಿಕೇರಿ ಕೊಡವ ಸಮಾಜದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊಡಗಿನಲ್ಲಿ ಇಂದು ಮುಗ್ದ ಜನರನ್ನು ಬಳಸಿಕೊಂಡು ಜಿಲ್ಲೆಯ ರೈತರು ಮತ್ತು ಬೆಳೆಗಾರರ ವಿರುದ್ಧ ಅನಾವಶ್ಯಕ ಸುಳ್ಳು ಆಪಾದನೆಗಳನ್ನು ಹೊರಿಸುವದರ ಮೂಲಕ ಎತ್ತಿಕಟ್ಟುವ ಕೆಲಸವನ್ನು &divound;ಕ್ಸಲಿಸಂನಲ್ಲಿ ಸದಾಭಿಪ್ರಾಯವನ್ನು ಹೊಂದಿರುವ ಕೆಲವರು ಮಾಡುತ್ತಿರುವದು ಅತ್ಯಂತ ಅಪಾಯಕಾರಿಯಾಗಿದ್ದು, ಇದರಿಂದ ಇಲ್ಲಿಯ ಆಚಾರ, ಸಂಸ್ಕøತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿಷಾದಿಸಿದ ಅವರು, ಆರ್.ಎಂ.ಸಿ. ಚುನಾವಣೆಯಲ್ಲಿ ಮತದಾರ ಉತ್ತಮ ಸಂದೇಶವನ್ನು ಬಿ.ಜೆ.ಪಿ ಪಕ್ಷದ ಪರ ನೀಡಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಭದ್ರವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕಾರ್ಯ ಕರ್ತರಿಗೆ ಕರೆ ನೀಡಿದರು.

ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಞ್ಞಂಗಡ ಅರುಣ್ ಭೀಮಯ್ಯ ಮಾತನಾಡಿ ಜನ ಸಂಘದ ಭದ್ರಕೋಟೆಯಾಗಿದ್ದ

(ಮೊದಲ ಪುಟದಿಂದ) ಹುದಿಕೇರಿಯಲ್ಲಿ ಆರ್.ಎಂ.ಸಿ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮತ್ತೆ ತನ್ನ ಗತ ವೈಭವವನ್ನು ಪಕ್ಷ ಕಾಣುವಂತಾಗಿದೆ.

ಕೇಂದ್ರ ಸರಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಸುಮಾರು 31 ಬಗೆಯ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದನ್ನು ಪ್ರತಿಯೊಬ್ಬರಿಗೂ ತಲಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧÀ್ಯಕ್ಷೆ ತೀತಿರ ಊರ್ಮಿಳ ಅವರು ಹುದಿಕೇರಿ ಭಾಗದಲ್ಲಿ ಪಕ್ಷ ಕಟ್ಟಲು ಕಾರ್ಯಕರ್ತರು ಸಾಕಷ್ಟು ಕಷ್ಟ ಪಟ್ಟಿದ್ದು, ಅದರ ಪ್ರತಿಫಲವಾಗಿ ಇಂದು ಪಕ್ಷದ ಅಭ್ಯರ್ಥಿ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ ಎಂದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಹುದಿಕೇರಿ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ ಉಪಾಧ್ಯಕ್ಷ ನೆಲ್ಲಿರ ಚಲನ್, ಹುದಿಕೇರಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಚಕ್ಕೇರ ಕಾಶಿ ಕಾಳಯ್ಯ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮುದ್ದಿಯಡ ಮಂಜು, ಪ್ರಮುಖರಾದ ಮುದ್ದಿಯಡ ಬೋಸ್, ಚಟ್ರಮಾಡ ಮಂದಣ್ಣ, ಚೋಡುಮಾಡ ಶ್ಯಾಂ, ಮತ್ರಂಡ ರಾಜೇಂದ್ರ, ಚೀರಂಡ ಕಂದಾ ಸುಬ್ಬಯ್ಯ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.