ಮಡಿಕೇರಿ, ಸೆ. 18: ಕೊಡಗು ಜಿಲ್ಲೆಯಲ್ಲಿ ಮೂರು ಸರಕಾರಿ ಆಯುರ್ವೇದ ಆಸ್ಪತ್ರೆಗಳು, ಒಂದು ಹೋಮಿಯೋಪತಿ ಆಸ್ಪತ್ರೆ, 7 ಆಯುರ್ವೇದ ಚಿಕಿತ್ಸಾಲಯ ಹಾಗೂ ಒಂದು ಹೋಮಿಯೋ ಚಿಕಿತ್ಸಾಲಯವಿದೆ.

ಮಡಿಕೇರಿ ಹಾಗೂ ವೀರಾಜಪೇಟೆಗಳಲ್ಲಿ ಆಯುರ್ವೇದ ಆಸ್ಪತ್ರೆಗಳಿದ್ದು, ಸೋಮವಾರಪೇಟೆಯಲ್ಲಿ ಆಯುರ್ವೇದ ಹಾಗೂ ಹೋಮಿಯೋಪತಿ ಆಸ್ಪತ್ರೆಗಳಿವೆ.

ಉಳಿದಂತೆ ಕರಿಕೆ, ಅರಪಟ್ಟು, ಬಲ್ಲಮಾವಟಿ, ಶ್ರೀಮಂಗಲ, ನಲ್ಲೂರು, ತೊರೆನೂರು ಹಾಗೂ ಬೆಸೂರುಗಳಲ್ಲಿ ಆಯುರ್ವೇದ ಚಿಕಿತ್ಸಾಲಯಗಳಿದ್ದು, ಪಾರಾಣೆಯಲ್ಲಿ ಹೋಮಿಯೋಪತಿ ಚಿಕಿತ್ಸಾಲಯವಿದೆ.

ಸೈನೋಸೈಟೀಸ್, ನೇಸಲ್ ಅಲರ್ಜಿ, ಅಸ್ತಮಾ, ಎಂಫೈಸೀಮಾ, ಬ್ರಾಂಕೈಟಿಸ್, ಮೈಗ್ರೇನ್, ಅನ್ನನಾಳ ಸಂಬಂಧಿಸಿದಂತೆ ಗ್ಯಾಸ್ಟ್ರೀಕ್, ಅಲ್ಸರ್, ಎದೆಯುರಿ, ಅಜೀರ್ಣ, ಅಸ್ತಮಾ, ಮಲಬದ್ಧತೆ, ಪೈಲ್ಸ್, ಸಂಧಿವಾತ, ದುಮಾಟಿಸಂ, ಕೊಲೈಟಿಸ್, ಅಮಿಬಿಕ್ ಡಿಸೆಂಟ್ರಿ, ತಲೆಕೂದಲು ಉದುರುವಿಕೆ ಹಾಗೂ ಸಂಬಂಧಿತ ಕಾಯಿಲೆಗಳು, ಚರ್ಮ ರೋಗಗಳು, ಮೂತ್ರವಹ ಸ್ರೋತಸ್ಸಿನಲ್ಲಿ ಉಂಟಾಗುವ ಕಲ್ಲುಗಳು, ಪಿತ್ತಾಶಯದಲ್ಲಿ ಉಂಟಾಗುವ ಕಲ್ಲುಗಳು, ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿ.ಸಿ.ಒ.ಡಿ.), ಮಧುಮೇಹ, ಯಕೃತ್‍ಗೆ ಸಂಬಂಧಿಸಿದಂತೆ ಉಂಟಾಗುವ ರೋಗಗಳು, ಜಾಂಡೀಸ್, ಹೃದಯದ ದೌರ್ಬಲ್ಯ, ರಕ್ತ ಹೀನತೆ, ವಂದ್ಯತ್ವ ಇತರೆ ಎಲ್ಲಾ ಕಾಯಿಲೆಗಳಿಗೂ ಉತ್ತಮ ಚಿಕಿತ್ಸೆ ಇದ್ದು, ಸಾರ್ವಜನಿಕರು ಸರಕಾರದ ಉಚಿತ ಸಲಹೆ ಹಾಗೂ ಔಷಧ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಹೆಚ್. ರಾಮಚಂದ್ರ ತಿಳಿಸಿದ್ದಾರೆ.