ಮಡಿಕೇರಿ, ಡಿ. 19: ಕೊಡಗು ಜಿಲ್ಲೆಯ ಪ್ರಪ್ರಥಮ ಮಹಿಳಾ ಪೊಲೀಸ್ ಠಾಣೆ ಇಂದಿನಿಂದ ಕಾರ್ಯಾರಂಭಗೊಂಡಿದೆ. ಜಿಲ್ಲೆಯ ಏಕೈಕ ಮಹಿಳಾ ಪೊಲೀಸ್ ಠಾಣೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆರಂಭಗೊಂಡಿದೆ. ಮಡಿಕೇರಿ ನಗರ ಪೊಲೀಸ್ ಠಾಣಾ ಕಟ್ಟಡದಲ್ಲಿ ಈ ತನಕ ಕಾರ್ಯನಿರ್ವಹಿಸುತ್ತಿದ್ದ ನಗರ ಸಂಚಾರಿ ಪೊಲೀಸ್ ಠಾಣೆಯನ್ನು ಇದೀಗ ಗ್ರಾಮಾಂತರ ಠಾಣೆ ಹಾಗೂ ಡಿವೈಎಸ್‍ಪಿ ಕಚೇರಿ ಇರುವ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸ ಲಾಗಿದ್ದು, ನಗರ ಸಂಚಾರಿ ಠಾಣೆ ಇದ್ದ ಕಟ್ಟಡವನ್ನು ಮಹಿಳಾ ಪೊಲೀಸ್ ಠಾಣೆಯಾಗಿ ಪರಿವರ್ತಿಸಲಾಗಿದೆ.

ತಾ. 19ರಿಂದಲೇ ಇಲ್ಲಿ ಮಹಿಳಾ ಪೊಲೀಸ್ ಕರ್ತವ್ಯ ಆರಂಭವಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, ಫೋಕ್ಸೋ ಕಾಯ್ದೆಯಡಿ ಬರುವ ಪ್ರಕರಣಗಳು, ವರದಕ್ಷಿಣೆ ಕಿರುಕುಳ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದಂತೆ ಇರುವ ಕಾನೂನುಗಳ ಕುರಿತಾಗಿ ಮಹಿಳಾ ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸಲಿದೆ.

ಈ ಠಾಣೆ ಇಡೀ ಜಿಲ್ಲೆಯ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಓರ್ವರು ವೃತ್ತ ನಿರೀಕ್ಷಕ, ಓರ್ವ ಎಸ್‍ಐ, ಇಬ್ಬರು ಎಎಸ್‍ಐ ಸೇರಿದಂತೆ ಒಟ್ಟು 44 ಸಿಬ್ಬಂದಿ ಹುದ್ದೆಗೆ ಮಂಜೂರಾತಿ ಇದೆ. ಸದ್ಯದ ಮಟ್ಟಿಗೆ ವೃತ್ತ ನಿರೀಕ್ಷಕರು ಹಾಗೂ ಎಸ್‍ಐ ನೇಮಕವಾಗಿಲ್ಲ. ಈ ನೇಮಕ ವಾಗುವವರೆಗೆ ನಗರ ವೃತ್ತ ನಿರೀಕ್ಷP Àರಾಗಿರುವ ಐ.ಪಿ. ಮೇದಪ್ಪ ಅವರು ಜವಾಬ್ದಾರಿ ನಿರ್ವಹಿಸಲಿ ದ್ದಾರೆ. ಎಎಸ್‍ಐಗಳಾಗಿ ರಾಧ ಹಾಗೂ ವಾಣಿ, ನಿಯೋಜಿತ ರಾಗಿದ್ದು, ಒಟ್ಟು 13 ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

(ಮೊದಲ ಪುಟದಿಂದ) ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಮಹಿಳಾ ಠಾಣೆಗೆ ನೇಮಕ ಮಾಡಲಾಗಿದೆ ಎಂದು ಪ್ರಬಾರ ಎಸ್‍ಪಿಯಾಗಿರುವ ಮುತ್ತುರಾಜ್ ಅವರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಮುತ್ತುರಾಜ್ ಅವರು ನೂತನ ಠಾಣೆ ಉದ್ಘಾಟಿಸಿದರು. ಈ ಸಂದರ್ಭ ಡಿವೈಎಸ್‍ಪಿ ಛಬ್ಬಿ, ವೃತ್ತ ನಿರೀಕ್ಷಕ ಮೇದಪ್ಪ ಇತರ ಅಧಿಕಾರಿಗಳು ಹಾಜರಿದ್ದರು.