ಮಡಿಕೇರಿ. ನ. 30: ನಬಾರ್ಡ್ನಿಂದ ತಯಾರಿಸಲ್ಪಟ್ಟಿರುವ 2017-18ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಬಿಡುಗಡೆ ಗೊಳಿಸಿದರು.
ನಗರದ ಕಾರ್ಪೊರೇಷನ್ ಬ್ಯಾಂಕ್ನ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅರ್ಧ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ರೈತರು, ಬೆಳೆಗಾರರು ಹಾಗೂ ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಒದಗಿಸು ವಂತಾಗಬೇಕು. ಆರ್ಥಿಕ ವರ್ಷದಲ್ಲಿ ಸಮಯ ಪಾಲನೆಯೊಂದಿಗೆ ಹಾಗೂ ಸಾಲ ಪಡೆದು ಪಾವತಿಸುವ ಪ್ರತಿಯೊಬ್ಬರಿಗೂ ಬ್ಯಾಂಕುಗಳ ಸೌಲಭ್ಯಗಳು ತಲುಪುವಂತೆ ಮಾಡಬೇಕು ಎಂದು ಅವರು ಹೇಳಿದರು.
ರೈತರಿಗೆ, ಉದ್ದಿಮೆದಾರರಿಗೆ ಸಾಲ ನೀಡಿದ ನಂತರ ಸಾಲ ನೀಡಿದ ಹಣ ಸದುಪಯೋಗವಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದಾರೆಯೇ ಎಂಬ ಬಗ್ಗೆ ಗಮನ ಹರಿಸಿದಲ್ಲಿ ಸಾಲ ನೀಡಿದ ಹಣ ಸದುಪಯೋಗ ವಾಗಲಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇದ್ದು, ರೈತರು ಸಂಕಷ್ಟದಲಿ ್ಲದ್ದಾರೆ. ಸಾಕಷ್ಟು ನಷ್ಟ ಸಂಭವಿಸುವ ಸಾಧ್ಯತೆಯಿದೆ. ಬ್ಯಾಂಕ್ಗಳ ಕಿರುಕುಳದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಎಡೆಮಾಡಿಕೊಡದೆ ರೈತರ ಬಗ್ಗೆ ಸಹಾನುಭೂತಿ ತೋರಬೇಕೆಂದು ಕರೆ ನೀಡಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳಿದ್ದರೂ ಪ್ರಗತಿಯಾಗಿಲ್ಲ. ಪರಿಶಿಷ್ಟರಿಗೆ ಅವಕಾಶಗಳಿದ್ದರೂ ಯಾರೂ ಕೂಡ ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡುತ್ತಿಲ್ಲ. ಬ್ಯಾಂಕ್ಗಳು ನಿಯಮಗಳನ್ನು ಸರಳೀಕರಣ ಮಾಡಿ ಅರ್ಹರಿಗೆ ಶೈಕ್ಷಣಿಕ ಸಾಲ ನೀಡಿ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ನಬಾರ್ಡಿನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮುಂಡಂಡ.ಸಿ.ನಾಣಯ್ಯ ಅವರು ಮಾಹಿತಿ ನೀಡಿ 2017-18ನೇ ಸಾಲಿನ ಸಾಮಥ್ರ್ಯ ಆಧಾರಿತ ಯೋಜನೆಯಲ್ಲಿ ಬೆಳೆ ಸಾಲಕ್ಕೆ 2740.29 ಕೋಟಿ, ಕೃಷಿ ಸಂಬಂಧಿತ ಅವಧಿ ಸಾಲಕ್ಕೆ 991.78 ಕೋಟಿ ರೂ. ಒಟ್ಟು ಕೃಷಿ ಮತ್ತು ಇತರ ಚಟುವಟಿಕೆ ಗಳಿಗಾಗಿ 3878.01 ಕೋಟಿ ರೂ., ಸಣ್ಣ ಉದ್ದಿಮೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ರೂ.332.71 ಕೋಟಿ, ರಫ್ತು ವಲಯಕ್ಕೆ ರೂ.243.10 ಕೋಟಿ, ಶಿಕ್ಷಣ ಸಾಲಕ್ಕೆ 173.26 ಕೋಟಿ, ಗೃಹ ನಿರ್ಮಾಣ ಸಾಲಕ್ಕೆ 243.10 ಕೋಟಿ ರೂ., ನವೀಕರಣ ವಿದ್ಯುಚ್ಛಕ್ತಿಗೆ 4.92 ಕೋಟಿ, ಇನ್ನಿತರ ವಲಯ ಅಂದರೆ ಸ್ವ ಸಹಾಯ
(ಮೊದಲ ಪುಟದಿಂದ) ಸಂಘಗಳು ಜಂಟಿ ಭಾದ್ಯತ ಗುಂಪು, ಸಣ್ಣ ಸಾರಿಗೆ ವಾಹನಗಳು ಮುಂತಾದ ವಲಯಕ್ಕೆ 57.75 ಕೋಟಿ ಮತ್ತು ಸಾಮಾಜಿಕ ಮೂಲ ಸೌಲಭ್ಯ ವಲಯಕ್ಕೆ 11.76 ಕೋಟಿ ಹೀಗೆ ಒಟ್ಟಾರೆ ಆಧ್ಯತಾ ವಲಯಕ್ಕೆ ಒಟ್ಟಾರೆ ರೂ.4,944.61 ಕೋಟಿ ನಿಗದಿ ಪಡಿಸಲಾಗಿದೆ. ಸಾಲ ಯೋಜನೆಯಲ್ಲಿ ಜಿಲ್ಲೆಗೆ ಪಾಲಿಹೌಸ್ ಚಟುವಟಿಕೆಯನ್ನು ಉತ್ತೇಜನಗೊಳಿಸಲು ಪ್ರಾದೇಶಿಕ ಅಭಿವೃದ್ಧಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಿಕೊಂಡು ರೂ.2.11 ಕೋಟಿಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ನಬಾರ್ಡ್ ರೂಪಿಸಿರುವ ರೂ.4944.61 ಸಾಲ ಯೋಜನೆಯು ಜಿಲ್ಲೆಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನೋಟವಾಗಿದ್ದು, ಜಿಲ್ಲೆಯಲ್ಲಿ ಅತ್ಯಗತ್ಯವಾಗಿ ಬೇಕಿರುವ ಕೃಷಿ, ಪಶುಪಾಲನೆ, ಕೈಗಾರಿಕೆ, ಮೀನುಗಾರಿಕೆ ಮತ್ತಿತರ ಕೃಷಿ ಆಧಾರಿತ ಅಂಶಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮಹತ್ತರವಾದ ಸಾಲ ಯೋಜನೆಯಾಗಿದೆ ಎಂದು ತಿಳಿಸಿದರು.
ಈ ಸಾಮಥ್ರ್ಯ ಸಾಲ ಯೋಜನೆಯು ಜಿಲ್ಲೆಯ ಸರ್ಕಾರಿ ಇಲಾಖೆ ಹಾಗೂ ಬ್ಯಾಂಕುಗಳಿಗೆ 2017-18ನೇ ಸಾಲಿನ ಆರ್ಥಿಕ ವರ್ಷಕ್ಕೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ಮಹತ್ವದಾಗಿದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ ಮಾತನಾಡಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿರುವ ಕಡಿಮೆ ಬಡ್ಡಿ, ಲಾಭವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತಾಗಲು ಬ್ಯಾಂಕ್ಗಳ ವ್ಯವಸ್ಥಾಪಕರು ಆದ್ಯತಾ ವಲಯದ ಗುರಿಯನ್ನು ತಲುಪಬೇಕಿದೆ ಮತ್ತು ಸಾಮಥ್ರ್ಯ ಆಧಾರಿತ ಸಾಲ ಯೋಜನೆಯ ಆಧಾರದ ಮೇಲೆ ಲೀಡ್ ಬ್ಯಾಂಕ್ 2017-18ನೇ ಸಾಲಿಗೆ ಜಿಲ್ಲಾ ಸಾಲ ಯೋಜನೆ ತಯಾರು ಮಾಡುತ್ತದೆ ಎಂದು ಅವರು ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ನ ಅಧಿಕಾರಿ ಬಿ.ಎನ್. ಗೋಪಿನಾಥ್ ಅವರು ಮಾತನಾಡಿ ನಬಾರ್ಡ್ನಿಂದ ಸಿದ್ಧಪಡಿಸಲಾದ ಯೋಜನೆಯನ್ನು ಪ್ರಶಂಸಿಸುತ್ತಾ ಈ ಯೋಜನೆಯನ್ನು ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬ್ಯಾಂಕಿನವರು ಎಲ್ಲಾ ಗುರಿಗಳನ್ನು ಸಾಧಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ ರೂ.3143 ಕೋಟಿ ಸಾಲದ ಗುರಿಯಲ್ಲಿ ರೂ.796 ಕೋಟಿ ಸಾಲ ವಿತರಣೆ ಮಾಡಿ ಶೇ.25ರಷ್ಟು ಪ್ರಗತಿ ಸಾಧಿಸಲಾಗಿದೆ. ಮಧ್ಯಮ ಮತ್ತು ಸಣ್ಣ ಉದ್ಯಮದಲ್ಲಿ ರೂ.253 ಕೋಟಿ ಸಾಲದ ಗುರಿಯಲ್ಲಿ ರೂ.119ಕೋಟಿ ಸಾಲ ವಿತರಣೆ ಮಾಡಿ ಶೇ.47 ರಷ್ಟು ಪ್ರಗತಿ ಸಾಧಿಸಲಾಗಿದೆ. ಇತರ ಆದ್ಯತಾ ವಲಯದ 127 ಕೋಟಿ ರೂ. ಸಾಲದ ಗುರಿಯಲ್ಲಿ ರೂ.122 ಕೋಟಿ ಸಾಲ ವಿತರಣೆ ಮಾಡಿ ಶೇ.96 ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟಾರೆ ಆದ್ಯತಾ ವಲಯಕ್ಕೆ ರೂ.3524 ಕೋಟಿ ಸಾಲದ ಗುರಿಯಲ್ಲಿ ರೂ.1036 ಕೋಟಿ ಸಾಲ ವಿತರಣೆ ಮಾಡಿ ಶೇ.29ರಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ಯತಾ ರಹಿತ ವಲಯದ ರೂ.319 ಕೋಟಿ ಸಾಲದ ಗುರಿಯಲ್ಲಿ ರೂ.210 ಕೋಟಿ ಸಾಲ ವಿತರಣೆ ಮಾಡಿ ಶೇ.66 ರಷ್ಟು ಪ್ರಗತಿ ಸಾಧಿಸಲಾಗಿದೆ.
ತಾಲೂಕುವಾರು ಮಾಹಿತಿ: ಮಡಿಕೇರಿ ತಾಲೂಕಿನಲ್ಲಿ ರೂ.1356 ಕೋಟಿ ಗುರಿಯಲ್ಲಿ ರೂ.386 ಕೋಟಿ ಸಾಲ ವಿತರಣೆ ಮಾಡಿ ಶೇ.29 ಪ್ರಗತಿ, ವೀರಾಜಪೇಟೆ ತಾಲೂಕಿನಲ್ಲಿ ರೂ.1450 ಕೋಟಿ ಗುರಿಯಲ್ಲಿ ರೂ.482 ಕೋಟಿ ಸಾಲ ವಿತರಣೆ ಮಾಡಿ ಶೇ.33 ಪ್ರಗತಿ. ಸೋಮವಾರಪೇಟೆ ತಾಲೂಕಿನಲ್ಲಿ ರೂ.1037 ಕೋಟಿ ಗುರಿಯಲ್ಲಿ ರೂ.377 ಕೋಟಿ ಸಾಲ ವಿತರಣೆ ಮಾಡಿ ಶೇ.36 ಪ್ರಗತಿ ಸಾಧಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ.32 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೈಸೂರು ಕಾರ್ಪೊರೇಷನ್ ಬ್ಯಾಂಕ್ ಡಿಜಿಎಂ ರಂಗಸ್ವಾಮಿ ಅವರು ಸಾಲ ಯೋಜನೆ ಬಗ್ಗೆ ಹಲವು ಮಾಹಿತಿ ನೀಡಿದರು. ಹಿರಿಯ ಬ್ಯಾಂಕ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳು, ನಿಗಮಗಳ ವ್ಯವಸ್ಥಾಪಕರು, ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.