ಗೋಣಿಕೊಪ್ಪಲು, ಅ. 1: ಪೊನ್ನಂಪೇಟೆ ನವಜ್ಯೋತಿ ಸಂಘದ ವತಿಯಿಂದ ಸಂತ ಅಂಥೋನಿ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಜೋಡು ಬೀಟಿಯ ಕಲ್ಯಾಣಿ ತಂಡ ಪ್ರಥಮ, ಮದೆನಾಡು ಕಾಫಿ ಲಿಂಕ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಹಲವು ತಂಡಗಳು ಭಾಗವಹಿಸಿದ್ದವು. ಕ್ರೀಡೆಯನ್ನು ಸಂತ ಅಂಥೋನಿ ಶಾಲೆಯ ಫಾದರ್ ರೆವರೆಂಡ್ ಜೇಕಬ್ ಕೊಲನೂರ್ ಉದ್ಘಾಟಿಸಿದರು. ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಜಯರಾಮ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಾಹನ ಸಂಚಾರದಿಂದ ತೊಂದರೆಯಾಗದಂತೆ ಶಾಲೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಬ್ಯಾರಿಕೇಡ್ ನಿರ್ಮಿಸುವ ಮೂಲಕ ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಯಿತು.