ಗೋಣಿಕೊಪ್ಪಲು, ಆ. 5: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಅರ್ವತೋಕ್ಲು ಸರ್ವದೈವತಾ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದ ಪ್ರಾಥಮಿಕ ವಿಭಾಗದ ಬಾಲಕರಲ್ಲಿ ವೀರಾಜಪೇಟೆ ಫಾತಿಮಾ ಶಾಲೆ ರಜತ್ ಗುರುರಾಜ್ ಪ್ರಥಮ, ಎಸ್‍ಎಂಎಸ್ ಶಾಲೆಯ ಹತಾಶ್ ಭೀಮಯ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.

ಪ್ರಾಥಮಿಕ ಬಾಲಕಿಯರಲ್ಲಿ ಸರ್ವ ದೈವತಾ ಶಾಲೆಯ ನೀಲಮ್ಮ (ಪ್ರ), ಸಂತ ಜೋಸೆಫ್ ಮಡಿಕೇರಿ ಸದ್ವಿನ್ ಗಿರೀಶ್ (ದ್ವಿ), ಪೌಢಶಾಲಾ ಬಾಲಕರಲ್ಲಿ ಗೋಣಿಕೊಪ್ಪಲು ಲಯನ್ಸ್ ಶಾಲೆಯ ಸಾಗರ್ ನಾಚಪ್ಪ (ಪ್ರ), ಮಡಿಕೇರಿ ಕೊಡಗು ವಿದ್ಯಾಲಯದ ಜಿ.ಎಸ್. ಸುದೀಪ್ (ದ್ವಿ), ಬಾಲಕಿಯರಲ್ಲಿ ವೀರಾಜಪೇಟೆ ಸಂದೀಪನಿ ಶಾಲೆಯ ವಿ.ಪಿ. ಧನ್ಯ (ಪ್ರ), ಸಂತ ಅನ್ನಮ್ಮ ಶಾಲೆಯ ಗ್ರಿಟಲ್ ಡಿಸೋಜಾ (ದ್ವಿ) ಸ್ಥಾನ ಪಡೆದುಕೊಂಡರು. ತೀರ್ಪು ಗಾರರಾಗಿ ಪೊನ್ನಿಮಾಡ ಪ್ರದೀಪ್ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಪುಳ್ಳಂಗಡ ನಟೇಶ್, ಕಾರ್ಯದರ್ಶಿ ಸಂಜು ಸೋಮಯ್ಯ, ನಿಕಟಪೂರ್ವ ಅಧ್ಯಕ್ಷ ರಾಬಿನ್ ಸುಬ್ಬಯ್ಯ, ಪದಾಧಿಕಾರಿಗಳಾದ ಅಶೋಕ್ ಹಾಗೂ ಬೋಪಣ್ಣ ಇದ್ದರು.