ಮಡಿಕೇರಿ, ಸೆ. 16: ಮೈಸೂರಿನ ಕೆ.ಎಲ್.ಇ. ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೆ.ಎಲ್.ಇ. ಸಂಸ್ಥೆಯ ನೆರವು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಹಾಗೂ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ರಾಜ್ಯದ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜು ವಿಭಾಗಗಳು (ಪದವಿ ವಿಜ್ಞಾನ ಮತ್ತು ಪದವಿಪೂರ್ವ ವಿಜ್ಞಾನ ಕಾಲೇಜುಗಳು) ಭಾಗವಹಿಸಬಹುದು.

ಪ್ರಾಥಮಿಕ ವಿಭಾಗದಿಂದ ಅತ್ಯುತ್ತಮ ಪ್ರದರ್ಶನ ನೀಡುವ ನಗರ ವಿಭಾಗದಿಂದ 2 ತಂಡಗಳು ಮತ್ತು ಗ್ರಾಮೀಣ ವಿಭಾಗದಿಂದ 2 ತಂಡಗಳಂತೆ ಒಟ್ಟು 4 ತಂಡಗಳನ್ನು ಆಯ್ಕೆ ಮಾಡಲಾಗುವದು. ಪ್ರಾಥಮಿಕ ವಿಭಾಗದವರು ‘ಪುನರ್ ಬಳಸಬಹುದಾದ ಶಕ್ತಿಯ ಮೂಲಗಳು’ ಮತ್ತು ಮಾಲಿನ್ಯ ನಿಯಂತ್ರಣ’ ಈ ಎರಡು ವಿಷಯಗಳನ್ನು ಮತ್ತು ಮಾಧ್ಯಮಿಕ - ಪ್ರೌಢಶಾಲೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಗರ ವಿಭಾಗದಿಂದ 2 ತಂಡಗಳು ಮತ್ತು ಗ್ರಾಮೀಣ ವಿಭಾಗದಿಂದ 2 ತಂಡಗಳಂತೆ ಒಟ್ಟು 4 ತಂಡಗಳನ್ನು ಆಯ್ಕೆಮಾಡಲಾಗುವದು. ಮಾಧ್ಯಮಿಕ - ಪ್ರೌಢ ವಿಭಾಗದವರು ‘ಅನ್ವಯಿತ ಗಣಿತ’ ಮತ್ತು ‘ಜೀವವೈವಿಧ್ಯ ಸಂರಕ್ಷಣೆ’ ಈ ಎರಡು ವಿಷಯಗಳನ್ನು ಮತ್ತು ಪದವಿಪೂರ್ವ ಮತ್ತು ವಿಜ್ಞಾನ ಪದವಿ ಕಾಲೇಜುಗಳ ವಿಭಾಗದಿಂದ ಅತ್ಯುತ್ತಮ ಪ್ರದರ್ಶನ ನೀಡುವ 2 ತಂಡಗಳನ್ನು ಆಯ್ಕೆಮಾಡಲಾಗುವದು. ಕಾಲೇಜು ವಿದ್ಯಾರ್ಥಿಗಳು ‘ಸ್ಮಾರ್ಟ್ ಸಿಟಿ, ಮಾಹಿತಿ ಸಂವಹನ ಮತ್ತು ಉಪಗ್ರಹಗಳು’ ಈ ವಿಷಯಗಳಲ್ಲಿ ಭಾಗವಹಿಸಬಹುದು. ಒಂದು ಜಿಲ್ಲೆಯಿಂದ 10 ತಂಡಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವದು.

ಮೈಸೂರು ಜಿಲ್ಲಾಮಟ್ಟದ ಸ್ಪರ್ಧೆಯು ತಾ. 17 ರಂದು ಗೋಪಾಲಸ್ವಾಮಿ ಪ್ರೌಢಶಾಲೆ. ನಂಜುಮಾಳಿಗೆ ಇಲ್ಲಿ ನಡೆಯಲಿದ್ದು, ಆಸಕ್ತ ಶಾಲಾ-ಕಾಲೇಜುಗಳು ಜಿ.ಬಿ. ಸಂತೋಷ್ ಕುಮಾರ್ ಮೊ. 8105503863 ರವರ ಬಳಿಯಲ್ಲಿ ನೋಂದಾಯಿಸಿಕೊಳ್ಳಲು ಕೋರಿದೆ.