ಗೋಣಿಕೊಪ್ಪಲು, ಸೆ. 23: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಡಾ. ಎಂ. ಎಂ. ಚಂಗಪ್ಪ ಸ್ಮರಣಾರ್ಥ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸುಗಂದ ಮತ್ತು ದರ್ಶನ್ ತಂಡ ಪ್ರಥಮ, ವಿದ್ಯಾ ನಿಕೇತನ ಪದವಿ ಪೂರ್ವ ಕಾಲೇಜಿನ ರಾಹುಲ್ ಪೊನ್ನಪ್ಪ ಮತ್ತು ಮನೋಜ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಜಿಲ್ಲೆಯ 30 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅರ್ಹತಾ ಪರೀಕ್ಷೆ ನಡೆಸಿ 5 ತಂಡಗಳನ್ನು ಆಯ್ಕೆ ಮಾಡಿ ಕೊಳ್ಳಲಾಯಿತು. ಫೀಲ್ಡ್ ಮಾರ್ಷಲ್ ಕಾಲೇಜಿನ 2 ತಂಡ, ವಿದ್ಯಾನಿಕೇತನ, ವಿರಾಜಪೇಟೆ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ತಲಾ ಒಂದೊಂದು ತಂಡ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಡಾ. ಅನಿಲ್ ಮಲ್ಲೋತ್ರ, ಪಮೀಲಾ ಗೇಲ್ಮಲ್ಲೋತ್ರ, ದೈಹಿಕ ನಿರ್ದೇಶಕ ಕೇಚಂಡ ಪ್ರಸನ್ನ, ಆರೋಗ್ಯ ಸಹಾಯಕಿ ಬಿ. ಆರ್. ಮಾಯಮ್ಮ ಇವರುಗಳನ್ನು ಸನ್ಮಾನಿಸ ಲಾಯಿತು. ಡಾ. ಎಂ. ಸಿ. ಕಾರ್ಯಪ್ಪ ಹಾಗೂ ಡಾ. ಫಾತಿಮ ಕಾರ್ಯಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ. ಸಿ. ಗಣಪತಿ, ಪ್ರಾಂಶುಪಾಲ ಪಟ್ಟಡ ಪೂವಣ್ಣ, ಸಂಚಾಲಕಿ ಡಾ. ಬೀನಾ, ಪಕ್ಷಿ ತಜ್ಞ ಡಾ. ನರಸಿಂಹನ್ ಉಪಸ್ಥಿತರಿದ್ದರು.