ಸೋಮವಾರಪೇಟೆ, ಡಿ. 23: ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಬಾಲಭವನ ಸಮಿತಿ ಆಶ್ರಯದಲ್ಲಿ ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರದಲ್ಲಿ ತಮ್ಮ ವಿಶೇಷ ಪ್ರತಿಭೆಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಲ್ಲಿ ಒಟ್ಟು 8 ಮಂದಿಯನ್ನು ಆಯ್ಕೆ ಮಾಡಲಾಯಿತು.
ಸೃಜನಾತ್ಮಕ ಕಲೆ ಪ್ರದರ್ಶನದಲ್ಲಿ ತೊರೆನೂರು ಸರಕಾರಿ ಪ್ರೌಢಶಾಲೆಯ ಅರುಣ್ಕುಮಾರ್ ಎ.ಜೆ. ಪ್ರಥಮ ಹಾಗೂ ಸೋಮವಾರಪೇಟೆಯ ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಸಂಕೀತ್ ದ್ವಿತೀಯ ಸ್ಥಾನಗಳಿಸಿದರು.
ಸೃಜನಾತ್ಮಕ ಬರವಣಿಗೆಯಲ್ಲಿ ಸೋಮವಾರಪೇಟೆ ಓಎಲ್ವಿ ಕಾನ್ವೆಂಟ್ನ ಶ್ರಾವಣಿ ಎಂ.ಯು., ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಪ್ರೇಕ್ಷಿತ ದ್ವಿತೀಯ. ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಸುಧನ್ವ ಎಸ್. ಪ್ರಥಮ, ತೊರೆನೂರು ಸರಕಾರಿ ಪ್ರೌಢಶಾಲೆಯ ಪುನಿತ್ಕುಮಾರ್ ಟಿ.ವಿ. ದ್ವಿತೀಯ. ವಿಜ್ಞಾನ ನೂತನ ಆವಿಷ್ಕಾರ ಪ್ರದರ್ಶನದಲ್ಲಿ ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಆಯುಷ್ ಪ್ರಥಮ ಹಾಗೂ ತೊರೆನೂರು ಸರಕಾರಿ ಪ್ರೌಢಶಾಲೆಯ ಕೌಶಿಕ್ ದ್ವಿತೀಯ ಸ್ಥಾನ ಗಳಿಸಿದರು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರವನ್ನು ವೇದಿಕೆಯಲ್ಲಿದ್ದ ತಾಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಪಂ ಸದಸ್ಯೆ ಎಚ್.ಎನ್. ತಂಗಮ್ಮ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯಿನಿ ಅಣ್ಣಮ್ಮ, ತಾಲೂಕು ಬಾಲಭವನ ಸಮಿತಿ ಸದಸ್ಯೆ ಸುಮಾ ಸುದೀಪ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್, ಮಹಿಳಾ ಮೇಲ್ವಿಚಾರಕಿ ಯಶೋಧ ವಿತರಿಸಿದರು.